ರಾಷ್ಟ್ರೀಯ

ಸೂರತ್‍ನಲ್ಲಿ ಗುಪ್ತಾಂಗ ಸೇರಿ ದೇಹದಲ್ಲಿ 86 ಗಾಯಗಳನ್ನು ಮಾಡಿ 9ರ ಬಾಲಕಿಯನ್ನು ಕತ್ತು ಹಿಸುಕಿ ಕೊಲೆ

Pinterest LinkedIn Tumblr

ಗಾಂಧಿನಗರ: ಕಥುವಾದಲ್ಲಿ ನಡೆದ 8 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗುತ್ತಿರೋ ಬೆನ್ನಲ್ಲೇ ಇದೀಗ ಸೂರತ್ ನಲ್ಲಿ ಅಂತಹದ್ದೇ ಘಟನೆ ನಡೆದಿರುವ ಬಗ್ಗೆ ಬೆಳಕಿಗೆ ಬಂದಿದೆ.

ಗುಜರಾತ್ ರಾಜ್ಯದ ಸೂರತ್‍ನ ಭೆಸ್ತಾನ ಪ್ರದೇಶದಲ್ಲಿ ಏಪ್ರಿಲ್ 6ರಂದು 9 ವರ್ಷದ ಬಾಲಕಿಯ ಶವ ಸಿಕ್ಕಿದ್ದು, ಆಕೆಯ ಮೇಲೆ ನಿರಂತರ 5 ದಿನ ಅತ್ಯಾಚಾರ ಮಾಡಿ, 8 ದಿನ ಚಿತ್ರಹಿಂಸೆ ನೀಡಿ, ನಂತರ ಕೊಲೆ ಮಾಡಲಾಗಿದೆ ಎಂಬುದಾಗಿ ವರದಿಯಾಗಿದೆ.

ಬಾಲಕಿಯ ಶವವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಸಿದಾಗ, ಆಕೆಯ ಮೇಲೆ ನಿರಂತರವಾಗಿ 5 ದಿನ ಅತ್ಯಾಚಾರ ಮಾಡಿ, ಮರದ ಆಯುಧಗಳಿಂದ ಚುಚ್ಚಿ ಚಿತ್ರ ಹಿಂಸೆ ನೀಡಿ ಬಳಿಕ ಕತ್ತು ಹಿಸುಕಿ ಕೊಲೆ ಮಾಡಲಾಗಿದೆ. ಗುಪ್ತಾಂಗ ಸೇರಿದಂತೆ ದೇಹದ ವಿವಿಧ ಭಾಗದಲ್ಲಿ 80 ಗಾಯಗಳಾಗಿವೆ ಎಂದು 5 ಗಂಟೆ ನಡೆಸಲಾದ ಪರೀಕ್ಷೆಯಲ್ಲಿ ತಿಳಿದು ಬಂದಿದೆ.

ಏಳು ದಿನಗಳಿಂದಲೇ ನಿರಂತರವಾಗಿ ಆಕೆಗೆ ಚಿತ್ರಹಿಂಸೆ ನೀಡಿದ್ದು, ದೇಹದ ಹೊರಭಾಗದಲ್ಲಿ ಸುಮಾರು 86 ಗಾಯಗಳಿವೆ ಎಂದು ಸಿವಿಲ್ ಆಸ್ಪತ್ರೆಯ ಫಾರೆನ್ಸಿಸ್ ಮುಖ್ಯಸ್ಥ ಗಣೇಶ ಗೊವೇಕರ್ ತಿಳಿಸಿದ್ದಾರೆ.

ಆದರೆ, ಮೃತ ಬಾಲಕಿಯ ಕುರಿತಾಗಿದೆ ಯಾವುದೇ ಮಾಹಿತಿ ದೊರೆತಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

Comments are closed.