ರಾಷ್ಟ್ರೀಯ

ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ: JNU ಪ್ರೊಫೆಸರ್‌ ವಿರುದ್ಧ ಕೇಸ್‌

Pinterest LinkedIn Tumblr


ಹೊಸದಿಲ್ಲಿ: ತನಗೆ ಲೈಂಗಿಕ ಕಿರುಕುಳ ನೀಡಿರುವುದಾಗಿ ಸಮಾಜ ವಿಜ್ಞಾನ ವಿಭಾಗದ ವಿದ್ಯಾರ್ಥಿನಿಯೋರ್ವಳು ನೀಡಿದ ದೂರನ್ನು ಅನುಸರಿಸಿ ಪೊಲೀಸರು ಇಲ್ಲಿನ ಜವಾಹರ್‌ಲಾಲ್‌ ವಿಶ್ವವಿದ್ಯಾಲಯದ ಓರ್ವ ಪ್ರೊಫೆಸರ್‌ ವಿರುದ್ಧ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

ಕಳೆದ ತಿಂಗಳಲ್ಲಿ ಒಂಬತ್ತು ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಇನ್ನೋರ್ವ ಜೆಎನ್‌ಯು ಫೊಫೆಸರ್‌ ಅರೆಸ್ಟ್‌ ಆಗಿದ್ದರು. ಆ ಬಳಿಕ ಅವರಿಗೆ ನಗರದ ನ್ಯಾಯಾಲಯ ಜಾಮೀನು ಮಂಜೂರು ಮಾಡಿತ್ತು.

ಹಾಲಿ ಪ್ರಕರಣದಲ್ಲಿ ದೂರು ನೀಡಿರುವ ವಿದ್ಯಾರ್ಥಿನಿಯು ತನಗೆ ಈ ಪ್ರೊಫೆಸರ್‌ ದೀರ್ಘ‌ಕಾಲದಿಂದ ಲೈಂಗಿಕ ಕಿರುಕುಳ ನೀಡುತ್ತಿದ್ದು ಈಗ ಅದು ಸಹಿಸಲಾಗದ ಮಟ್ಟಕ್ಕೆ ಹೋಗಿರುವ ಕಾರಣ ತಾನು ದೂರು ಆತನ ವಿರುದ್ಧ ದೂರು ನೀಡುತ್ತಿದ್ದೇನೆ ಎಂದು ಹೇಳಿದ್ದಾಳೆ.

-ಉದಯವಾಣಿ

Comments are closed.