ರಾಷ್ಟ್ರೀಯ

ಟೀ, ತಿಂಡಿ ತಿನಿಸಿಗೆ ಮುಖ್ಯಮಂತ್ರಿ ಕೇಜ್ರಿವಾಲ್​ ಕಚೇರಿ ಖರ್ಚು ಮಾಡಿದ್ದೆಷ್ಟು ಗೊತ್ತೇ?

Pinterest LinkedIn Tumblr

ದೆಹಲಿ: ಟೀ, ಕಾಫಿ, ತಿಂಡಿ ತಿನಿಸಿಗಾಗಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್​ ಅವರ ಕಚೇರಿ ಈ ಮೂರು ವರ್ಷಗಳಲ್ಲಿ ಖರ್ಚು ಮಾಡಿದ್ದು ಬರೋಬ್ಬರಿ 1.3 ಕೋಟಿ. ರೂಗಳನ್ನು.

ಹೌದು, ಆರ್​ಟಿಐ ಕಾರ್ಯಕರ್ತ, ಉತ್ತರಾಖಂಡದ ಹಲ್ದ್​ವಾನಿ ಮೂಲದ ಹೇಮಂತ್​ ಸಿಂಗ್​ ಗೌನಿಯಾ ಎಂಬವರು ಸಲ್ಲಿಸಿದ್ದ ಅರ್ಜಿಗೆ ಉತ್ತರ ನೀಡಿರುವ ದೆಹಲಿ ಮುಖ್ಯಮಂತ್ರಿ ಕಚೇರಿ, ಈ ಮೂರು ವರ್ಷಗಳಲ್ಲಿ ತಿಂಡಿ ತಿನಿಸಿಗಾಗಿ 1,03,04,162 ರೂ. ಗಳನ್ನು ಖರ್ಚು ಮಾಡಿರುವುದಾಗಿ ಹೇಳಿದೆ.

ಮುಖ್ಯಮಂತ್ರಿ ಕಚೇರಿಯ ತಿಂಡಿ ತಿನಿಸಿನ ಈ ಖರ್ಚು ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿರುವುದು ಕೂಡ ಇದೀಗ ಬಹಿರಂಗವಾಗಿದೆ. 2015-16ರಲ್ಲಿ ರೂ. 23.12 ಲಕ್ಷಗಳಿದ್ದ ವೆಚ್ಚ, 2016-17ರ ಹೊತ್ತಿಗೆ ದ್ವಿಗುಣಗೊಂಡು ರೂ. 46.54 ಲಕ್ಷಕ್ಕೆ ಏರಿಕೆಯಾಗಿದೆ. ಇನ್ನು 2017-18ರಲ್ಲಿ ಈ ವರೆಗೆ ರೂ. 33.36 ಲಕ್ಷ ಖರ್ಚಾಗಿದೆ ಎಂದು ಮಾಹಿತಿ ನೀಡಿದೆ.

ಇನ್ನು ಆರ್​​ಟಿಐ ಅಡಿಯಲ್ಲಿ ಈ ಮಾಹಿತಿಯನ್ನು ಪಡೆದುಕೊಂಡಿರುವ ಹೇಮಂತ್​ ಸಿಂಗ್ ಗೌನಿಯಾ ಈ ಬಗ್ಗೆ ಪ್ರತಿಕ್ರಿಯಿಸಿ, ” ಈ ರೀತಿಯ ದುಂದು ವೆಚ್ಚವನ್ನು ಸರ್ಕಾರ ನಿಯಂತ್ರಿಸಬೇಕು. ಒಂದು ಹೊತ್ತಿನ ಊಟವೂ ಸಿಗದ ಬಡವರಿಗೆ ಈ ಹಣವನ್ನು ವಿನಿಯೋಗಿಸಿದರೆ ಒಳಿತು. ಸರ್ಕಾರ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿ ದುಂದುವೆಚ್ಚಕ್ಕೆ ಕಡಿವಾಣ ಹಾಕಲಿದೆ ಎಂದು ನಾನು ಭಾವಿಸಿದ್ದೇನೆ,” ಎಂದು ಅಭಿಪ್ರಾಯಪಟ್ಟಿದ್ದಾರೆ.

Comments are closed.