ರಾಷ್ಟ್ರೀಯ

ಶಿವಮೊಗ್ಗ ರ‍್ಯಾಲಿಗೆ ಜನ ಸೇರಿಲ್ಲವೇಕೆ: ಕೈ ಮುಖಂಡರಿಗೆ ರಾಹುಲ್‌ ಪ್ರಶ್ನೆ

Pinterest LinkedIn Tumblr


ದಾವಣಗೆರೆ: ಶಿವಮೊಗ್ಗ ರ‍್ಯಾಲಿಗೆ ಜನರು ಸೇರದ ಬಗ್ಗೆ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮುಖಂಡರ ಜತೆ ಚರ್ಚಿಸಿದ ಅವರು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮತ್ತು ಕೆ.ಎಸ್. ಈಶ್ವರಪ್ಪ ಅವರ ಜಿಲ್ಲೆಯಾದ ಶಿವಮೊಗ್ಗದಲ್ಲಿ ಕಾಂಗ್ರೆಸ್‌ ಸಭೆಗೆ ನಿರೀಕ್ಷಿಸಿದಷ್ಟು ಜನ ಸೇರಿಲ್ಲ ಏಕೆ ಎಂದು ಪ್ರಶ್ನಿಸಿದರು.

ರಾಹುಲ್‌ ಅವರ ಈ ಪ್ರಶ್ನೆಗೆ ಬಿಸಿಲು ಜೋರಾಗಿರುವ ಕಾರಣ ಜನ ಸೇರಿಲ್ಲ ಎಂದು ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಸೇರಿ ನಾಯಕರು ಕಾರಣ ನೀಡಿದರು.

ಬೇರೆ ಕಡೆ ಇಲ್ಲದ ಬಿಸಿಲು ಅಲ್ಲಿ ಮಾತ್ರ ಇದೆಯಾ ಎಂದು ರಾಹುಲ್‌ ಪ್ರಶ್ನಿಸಿದ್ದಾರೆ. ಪಕ್ಷ ಸಂಘಟನೆಗೆ ಒತ್ತು ನೀಡುವಂತೆ ಮತ್ತು ಯುವಜನರನ್ನು ಪಕ್ಷಕ್ಕೆ ಆಕರ್ಷಿಸುವಂತೆ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದರು.

Comments are closed.