ರಾಷ್ಟ್ರೀಯ

ಪೆಟ್ರೋಲ್‌ ದರ: 6 ದಿನಕ್ಕೆ 93 ಪೈಸೆ ಹೆಚ್ಚಳ

Pinterest LinkedIn Tumblr


ಹೊಸದಿಲ್ಲಿ: ಪೆಟ್ರೋಲ್‌ ಮತ್ತು ಡೀಸೆಲ್‌ ದರ ಏರುಗತಿಯಲ್ಲೇ ಸಾಗುತ್ತಿದ್ದು, ಆರು ದಿನಗಳಲ್ಲಿ 93 ಪೈಸೆ ಹೆಚ್ಚಾಗಿದೆ.

ಜಾಗತಿಕವಾಗಿ ಕಚ್ಚಾ ತೈಲದ ಬೆಲೆ ಏರುತ್ತಿರುವ ಹಿನ್ನೆಲೆಯಲ್ಲಿ ತೈಲ ಬೆಲೆಯೂ ಏರುಮುಖವಾಗಿದ್ದು, ಏಪ್ರಿಲ್‌ 3ರಂದು ಪೆಟ್ರೋಲ್‌ ಬೆಲೆ 11-13 ಪೈಸೆ ಮತ್ತು ಡೀಸೆಲ್‌ ಬೆಲೆ 13-14 ಪೈಸೆ ಹೆಚ್ಚಾಗಿದೆ.

ದಿಲ್ಲಿಯಲ್ಲಿ ಪೆಟ್ರೋಲ್‌ ದರ ರೂ. 73.95ಕ್ಕೇರಿದ್ದು, ಇದು 2013ರ ಸೆಪ್ಟೆಂಬರ್‌ ಬಳಿಕದ ಗರಿಷ್ಠ ಬೆಲೆಯಾಗಿದೆ. ಮುಂಬಯಿಯಲ್ಲಿ ಪೆಟ್ರೋಲ್‌ ಬೆಲೆ ರೂ. 81.80ಗೇರಿದೆ. ಡೀಸೆಲ್‌ ಬೆಲೆ ದಿಲ್ಲಿಯಲ್ಲಿ ದಾಖಲೆಯ ರೂ. 64.82ಗೇರಿದರೆ, ಮುಂಬಯಿಯಲ್ಲಿ ರೂ. 69.82ಕ್ಕೆ ತಲುಪಿದೆ.

Comments are closed.