ರಾಷ್ಟ್ರೀಯ

ತೆಲಂಗಾಣದಲ್ಲಿ ಕೋತಿ ಹಾವಳಿ ತಡೆಗೆ 30 ಕೋಟಿ ರೂ.

Pinterest LinkedIn Tumblr


ಹೈದರಾಬಾದ್: ಮಿತಿ ಮೀರಿದ ಕೋತಿಗಳ ಹಾವಳಿ ತಡೆಯಲುತೆಲಂಗಾಣ ಅರಣ್ಯ ಇಲಾಖೆಯು 30 ಕೋಟಿ ರೂಪಾಯಿಗಳ ಯೋಜನೆಯನ್ನು ಸಿದ್ಧಗೊಳಿಸಿದೆ.

ಅರಣ್ಯ ಸಚಿವ ಜೋಗು ರಾಮಣ್ಣ ಶಿಫಾರಸಿನ ಮೆರೆಗೆ ಸರಕಾರವು ತಜ್ಞರ ಸಮಿತಿಯನ್ನು ರಚಿಸಿದೆ. ಇದರಂತೆ ಮೊದಲ ಸಭೆಯು ಸೋಮವಾರದಂದು ಅರಣ್ಯ ಭವನದಲ್ಲಿ ಸಭೆ ಸೇರಿತ್ತು. ಅಲ್ಲದೆ ರಾಜ್ಯಾದ್ಯಂತ ರೈತರಿಗೆ ಆಗುವ ತೊಂದರೆಯನ್ನು ಪರಿಗಣಿಸಿ ಮಂಗಗಳ ನಿಯಂತ್ರಣಕ್ಕೆ ಯೋಜನೆ ರೂಪಿಸಲಾಗಿದೆ.

ಮಂಗಗಳ ಹಾವಳಿ

ಗ್ರಾಮೀಣ ಹಾಗೂ ನಗರದ ಜನರು ಏಕ ರೂಪದಲ್ಲಿ ಮಂಗಳ ಹಾವಳಿಯಿಂದ ತೊಂದರೆಯನ್ನು ಅನುಭವಿಸುತ್ತಿದ್ದಾರೆ. ಇದನ್ನು ದೀರ್ಘಾವಾಧಿಯ ಪರಿಹಾರದಿಂದ ಮಾತ್ರ ನಿಯಂತ್ರಿಸಲು ಸಾಧ್ಯ ಎಂಬುದನ್ನು ಸರಕಾರ ಮನಗಂಡಿದೆ. ಸದನದ ಶೈತ್ಯ ಸಭೆಯಲ್ಲೂ ಇದು ಪ್ರತಿಧ್ವನಿಸಿತ್ತು. ಅಲ್ಲದೆ ಬೇಗನೇ ಪರಿಹಾರ ಸೂಚಿಸುವಂತೆ ಇಲಾಖೆಗೆ ಸೂಚನೆ ನೀಡಲಾಗಿತ್ತು.

ಮಾನವ ವಾಸ ಪ್ರವೇಶದಲ್ಲೂ ಮಂಗಗಳ ಅತಿಯಾದ ಸಾನಿಧ್ಯವು ಹೈದರಾಬಾದ್ ಸೇರಿದಂತೆ ಅನೇಕ ತೆಲಂಗಾಣ ಜಿಲ್ಲೆಗಳಲ್ಲಿ ಸಮಸ್ಯೆಯಾಗಿಬಿಟ್ಟಿದೆ. ಅದಿಲಬಾದ್, ನಿರ್ಮಲ್, ಮಂಚೇರಿಯಲ್, ಕುಮ್ರಮ್ ಹಾಗೂ ಬೀಮ್ ಆಸಿಫಾಬಾದ್‌ ಜಿಲ್ಲೆಗಳಂತೂ ಮಂಗಗಳ ಹಾವಳಿ ಮಿತಿ ಮೀರಿದೆ.

ರೈತರಿಗೆ ಮಂಗಗಳ ಕಾಟ

ಆಹಾರದ ಹುಡುಕಾಟದಲ್ಲಿ ಬರುವ ಮಂಗಳು ಕೃಷಿ ಕ್ಷೇತ್ರಗಳನ್ನು ಹಾಳು ಮಾಡುತ್ತಿವೆ. ಅಷ್ಟೇ ಯಾಕೆ ರೈತರಿಗೆ ದೈಹಿಕ ಗಾಯಗಳನ್ನುಂಟು ಮಾಡುತ್ತಿದೆ. ಅತ್ತ ಕೋತಿಯ ಹಾವಳಿಗಳನ್ನು ತಡೆಗಟ್ಟಲು ಅನೇಕ ವಿಧಾನಗಳನ್ನು ಅನುಸರಿಸಿದರೂ ಯಾವುದೇ ಪ್ರಯೋಜನವುಂಟಾಗಲಿಲ್ಲ.

Comments are closed.