ವಿಲ್ಲುಪುರಂ: ವಿದ್ಯಾರ್ಥಿಯೊಬ್ಬ ವಾರ್ಷಿಕ ಪರೀಕ್ಷೆ ಬರೆಯಲು ನಿರಾಕರಿಸುತ್ತಿದ್ದ. ಆದರೆ ಪೊಲೀಸ್ ಪೇದೆ ಹಾಗೂ ಶಾಲೆಯ ಪ್ರಾಂಶುಪಾಲರ ಸಮಯಪ್ರಜ್ಞೆಯಿಂದಾಗಿ ವಿದ್ಯಾರ್ಥಿ ಪರೀಕ್ಷೆ ಬರೆಯುವ ಮೂಲಕ ಬಾಳಿಗೆ ಬೆಳಕಾಗಿದ್ದಾರೆ.
ತಮಿಳುನಾಡಿನ ವಿಲ್ಲುಪುರಂ ಜಿಲ್ಲೆಯ ಕೊಂತಮೂರ್ ಸರಕಾರಿ ಹಿರಿಯ ಮಾಧ್ಯಮ ಶಾಲೆಯಲ್ಲಿ ಪ್ಲಸ್ ವನ್ ಪರೀಕ್ಷೆ ನಡೆಯುತ್ತಿತ್ತು. ವಿದ್ಯಾರ್ಥಿಗಳೆಲ್ಲ ಪರೀಕ್ಷೆಗೆ ಹಾಜರಾದರೂ ಥೇನ್‌ಕೊಡಿಪಕ್ಕಂ ನಿವಾಸಿ ಮೂನಿಷ್ ಮಾತ್ರ ಹಾಜರಾಗಿರಲಿಲ್ಲ.
ವಿದ್ಯಾರ್ಥಿ ಪರೀಕ್ಷೆ ಬರೆಯಲು ಆಗಮಿಸದಿರುವುದನ್ನು ಗಮನಿಸಿದ ಪ್ರಾಂಶುಪಾಲ, ಕಾಲೆೇಜು ಭದ್ರತಾ ಸಿಬ್ಬಂದಿ ಮಾಧನ್ ಅವರಲ್ಲಿ ವಿಚಾರಿಸಿದ್ದರು. ಥೇನ್‌ಕೊಡಿಪಕ್ಕಂ ಶಾಲೆಯಿಂದ ನಾಲ್ಕು ಕೀ.ಮಿ.ಗಳಷ್ಟು ದೂರದಲ್ಲಿತ್ತು.
ಸಮಯ ಆಗಲೇ ಮೀರಿ ಹೋಗಿರುವುದರಿಂದ ವಿದ್ಯಾರ್ಥಿ ಮನೆಗೆ ತೆರಳಿ ವಿಚಾರ ಮುಟ್ಟಿಸಿ ಹಿಂತಿರುಗುದು ಕಷ್ಟಕರವೆನಿಸಿತ್ತು. ತಕ್ಷಣವೇ ಪೊಲೀಸ್ ಕಂಟ್ರೋಲ್ ರೂಂಗೆ ರಿಂಗಣಿಸಿದ ಮಾಧನ್, ಸ್ಥಳದಲ್ಲಿ ಗಸ್ತು ನಿರತರಾಗಿರುವ ಪೊಲೀಸರ ನೆರವನ್ನು ಕೋರಿದ್ದರು.
ಥೇನ್‌ಕೊಡಿಪಕ್ಕಂನಲ್ಲಿ ಕಾರ್ಯ ನಿರತರಾಗಿದ್ದ ಆರಕ್ಷಕ ಮನಿಕಂಠನ್, ತಕ್ಷಣವೇ ವಿದ್ಯಾರ್ಥಿ ಮನೆಗೆ ತೆರಳಿ ಪರೀಕ್ಷೆಗೆ ಏಕೆ ತೆರಳಿಲ್ಲ ಎಂಬುದರ ಬಗೆಗಿನ ಕಾರಣವನ್ನು ತಿಳಿದುಕೊಂಡರು. ಹೆತ್ತವರ ಜತೆ ಜಗಳವಾಡಿದ್ದ ವಿದ್ಯಾರ್ಥಿ ಮನನೊಂದು ಪರೀಕ್ಷೆಗೆ ಹಾಜರಾಗಿರಲಿಲ್ಲ. ಅಲ್ಲಿಂದ ಬಳಿಕ ಆದಷ್ಟು ಬೇಗನೇ ವಿದ್ಯಾರ್ಥಿಯನ್ನು ಶಾಲೆಗೆ ತಲುಪಿಸಲಾಯಿತು.
ಪರೀಕ್ಷೆ 10 ಗಂಟೆಗೆ ಪ್ರಾರಂಭವಾದರೆ ವಿದ್ಯಾರ್ಥಿ 10.10ಕ್ಕೆ ಆಗಮಿಸಿದ್ದರು. ಬಳಿ ಪರೀಕ್ಷೆ ಬರೆಯಲು ಅನುವು ಮಾಡಿಕೊಡಲಾಗಿತು. ಪರೀಕ್ಷೆ ಬರೆದ ಬಳಿಕ ಪ್ರಾಂಶುಪಾಲ ಹಾಗೂ ಪೊಲೀಸ್ ಪೇದೆಗೆ ವಿದ್ಯಾರ್ಥಿ ಕೃತಜ್ಞತೆಯನ್ನು ಸಲ್ಲಿಸಿದರು.
Comments are closed.