ರಾಷ್ಟ್ರೀಯ

3ನೇ ಮದುವೆಗೆ ವಿಜಯ್ ಮಲ್ಯ ಸಿದ್ಧತೆ ! ಹುಡುಗಿ ಯಾರು ಗೊತ್ತೇ..?

Pinterest LinkedIn Tumblr

ಲಂಡನ್: ವಿವಿಧ ಬ್ಯಾಂಕ್ ಗಳಲ್ಲಿ ಸಾವಿರಾರು ಕೋಟಿ ರೂಪಾಯಿ ಸಾಲ ಮಾಡಿ ವಿದೇಶಕ್ಕೆ ಪರಾರಿಯಾಗಿರುವ ವಿಜಯ್ ಮಲ್ಯ ಲಂಡನ್ ನಲ್ಲಿ ಶೀಘ್ರದಲ್ಲಿಯೇ ಮಾಜಿ ಗಗನಸಖಿ, ಗೆಳತಿ ಪಿಂಕಿ ಲಾಲ್ವಾನಿ ಅವರನ್ನು ವಿವಾಹವಾಗಲಿದ್ದಾರೆ ಎಂಬುದಾಗಿ ಹಲವಾರು ಮಾಧ್ಯಮಗಳು ವರದಿ ಮಾಡಿವೆ.

ವಿಜಯ್ ಮಲ್ಯ ಈಗಾಗಲೇ ಎರಡು ಮದುವೆಯಾಗಿದ್ದಾರೆ. ಸಮೀರಾ ತಯ್ಯಬ್ಜೀ ಹಾಗೂ ರೇಖಾ ಮಲ್ಯರನ್ನು ಮಲ್ಯ ವಿವಾಹವಾಗಿದ್ದು, ಇದೀಗ 3ನೇ ಮದುವೆ ಸಿದ್ಧತೆಯಲ್ಲಿರುವುದಾಗಿ ವರದಿ ತಿಳಿಸಿದೆ.

1993ರಲ್ಲಿ ರೇಖಾ ಮಲ್ಯ ಅವರನ್ನು ವಿಜಯ್ ಮಲ್ಯ ಕಾನೂನು ಬದ್ಧವಾಗಿಯೇ ವಿವಾಹವಾಗಿದ್ದರು. ಮಲ್ಯಗೆ ಸಿದ್ದಾರ್ಥ್, ಲಿಯೆನ್ನಾ ಹಾಗೂ ತಾನ್ಯಾ ಸೇರಿದಂತೆ ಮೂವರು ಮಕ್ಕಳಿದ್ದಾರೆ.

ಕಿಂಗ್ ಫಿಶರ್ ಏರ್ ಲೈನ್ಸ್ ನಲ್ಲಿ ಗಗನಸಖಿ ಕೆಲಸವನ್ನು ಪಿಂಕಿಗೆ ನೀಡಿದ ಮೇಲೆ 2011ರಲ್ಲಿ ಇಬ್ಬರ ನಡುವೆ ಗೆಳೆತನ ಆರಂಭವಾಗಿತ್ತು. ಇತ್ತೀಚೆಗೆ ಇಬ್ಬರು ಜತೆಯಾಗಿಯೇ ತಿರುಗಾಡುತ್ತಿರುವುದಾಗಿ ವರದಿಗಳು ವಿವರಿಸಿವೆ.

ಮದ್ಯದ ದೊರೆ ವಿಜಯ್ ಮಲ್ಯ ಕಷ್ಟದ ದಿನಗಳನ್ನು ಎದುರಿಸುತ್ತಿದ್ದ ವೇಳೆಯಲ್ಲಿ ಬೆಂಬಲಕ್ಕೆ ನಿಂತಿದ್ದು ಲಾಲ್ವಾನಿಯಂತೆ! ಅಲ್ಲದೇ ಲಂಡನ್ ವೆಸ್ಟ್ ಮಿನಿಸ್ಟರ್ ಕೋರ್ಟ್ ನಲ್ಲಿ ಗಡಿಪಾರು ಪ್ರಕರಣದ ವಿಚಾರಣೆ ವೇಳೆಯಲ್ಲಿಯೂ ಪಿಂಕಿ ಮಲ್ಯ ಜತೆ ಹಾಜರಾಗಿರುವುದಾಗಿ ವರದಿ ಹೇಳಿದೆ.

Comments are closed.