ರಾಷ್ಟ್ರೀಯ

ಅಮಿತ್‌ ಶಾ ಪತ್ರ ಸುಳ್ಳಿನ ಕಂತೆ: ಚಂದ್ರಬಾಬು ನಾಯ್ಡು ಆರೋಪ

Pinterest LinkedIn Tumblr


ಹೊಸದಿಲ್ಲಿ: ತೆಲುಗುದೇಶಂ ಪಕ್ಷ ರಾಜಕೀಯ ಉದ್ದೇಶಗಳಿಗಾಗಿ ಎನ್‌ಡಿಎ ಮೈತ್ರಿ ತೊರೆದಿದೆ ಎಂಬ ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಅವರ ಹೇಳಿಕೆ ಸುಳ್ಳು ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್‌. ಚಂದ್ರಬಾಬು ನಾಯ್ಡು ಹೇಳಿದ್ದಾರೆ.

‘ಅಮಿತ್ ಶಾ ಅವರ ಪತ್ರ ಸಂಪೂರ್ಣ ಸುಳ್ಳಿನಿಂದ ಕೂಡಿದ್ದು, ಅವರ ಮನೋಭಾವವನ್ನು ತೋರಿಸುತ್ತದೆ. ಕೇಂದ್ರ ಸರಕಾರ ಈಶಾನ್ಯ ರಾಜ್ಯಗಳಿಗೆ ವಿಶೇಷ ಆರ್ಥಿಕ ನೆರವು ನೀಡುತ್ತಿದೆ. ಆಂಧ್ರಪ್ರದೇಶಕ್ಕೂ ಅದೇ ಬಗೆಯ ನೆರವು ನೀಡಲು ಏನು ಅಡ್ಡಿ? ಕೇಂದ್ರ ನೆರವು ನೀಡಲು ಮುಂದಾದರೆ ಆಂಧ್ರಕ್ಕೆ ಹಲವು ಉದ್ಯಮಗಳು ಬರುತ್ತವೆ’ ಎಂದು ನಾಯ್ಡು ತಿಳಿಸಿದರು.

ಕೇಂದ್ರ ಸರಕಾರ ನೀಡಿದ ಹಣವನ್ನೇ ರಾಜ್ಯ ಸರಕಾರ ಸರಿಯಾಗಿ ಬಳಸಿಕೊಂಡಿಲ್ಲ ಎಂಬ ಶಾ ಆರೋಪವನ್ನು ನಾಯ್ಡು ನಿರಾಕರಿಸಿದರು.

Amit Shah in his letter says centre gave many funds to the state, we couldn’t utilise them. They’re trying to say… https://t.co/HjiBeNaWDG
— ANI (@ANI) 1521884295000

‘ಕೇಂದ್ರವು ರಾಜ್ಯಕ್ಕೆ ಸಾಕಷ್ಟು ನೆರವು ನೀಡಿದೆ. ನಾವೇ ಅದನ್ನು ಸರಿಯಾಗಿ ಬಳಸಿಕೊಳ್ಳಲು ವಿಫಲರಾಗಿದ್ದೇವೆ ಎಂದು ಅಮಿತ್‌ ಶಾ ತಮ್ಮ ಪತ್ರದಲ್ಲಿ ಹೇಳಿದ್ದಾರೆ. ಆಂಧ್ರ ಪ್ರದೇಶ ಸರಕಾರ ಅಸಮರ್ಥ ಎಂದು ಹೇಳಲು ಅವರು ಪ್ರಯತ್ನಿಸುತ್ತಿದ್ದಾರೆ. ನಮ್ಮ ಸರಕಾರ ಉತ್ತಮ ಜಿಡಿಪಿ, ಉತ್ತಮ ಕೃಷಿ ಉತ್ಪನ್ನಗಳನ್ನು ಹೊಂದಿದೆ. ಅಲ್ಲದೆ ಹಲವು ರಾಷ್ಟ್ರೀಯ ಪುರಸ್ಕಾರಗಳನ್ನೂ ನಮ್ಮ ಸರಕಾರ ಪಡೆದಿದೆ. ಹಾಗಿದ್ದರೂ ಆಂಧ್ರ ಪ್ರದೇಶ ದಕ್ಷಿಣದ ಇತರ ರಾಜ್ಯಗಳಿಗಿಂತ ತಲಾ ಆದಾಯದಲ್ಲಿ ಹಿಂದಿದೆ’ ಎಂದು ನಾಯ್ಡು ಹೇಳಿದರು.

ಎನ್‌ಡಿಎ ತೊರೆಯುವ ಟಿಡಿಪಿ ನಿರ್ಧಾರ ದುರದೃಷ್ಟಕರ: ಅಮಿತ್‌ ಶಾ
ಎನ್‌ಡಿಎ ಜತೆ ಮೈತ್ರಿ ಕಡಿದುಕೊಂಡ ಟಿಡಿಪಿ ನಿರ್ಧಾರ ‘ದುರದೃಷ್ಟಕರ ಮತ್ತು ಏಕಪಕ್ಷೀಯ’ ಎಂದು ಶನಿವಾರ ನಾಯ್ಡು ಅವರಿಗೆ ಬರೆದ ಪತ್ರದಲ್ಲಿ ಶಾ ಹೇಳಿದ್ದರು.

Comments are closed.