ರಾಷ್ಟ್ರೀಯ

ಪಿಸ್ತೂಲು ಹಿಡಿದು ಸೆಲ್ಪಿ ತೆಗೆದುಕೊಳ್ಳುತ್ತಿದ್ದ ವೇಳೆ ಯುವಕನೊಬ್ಬನಿಗೆ ಗುಂಡು ತಗುಲಿ ಸಾವು

Pinterest LinkedIn Tumblr

ನವದೆಹಲಿ: ಕೈಯಲ್ಲಿ ಪಿಸ್ತೂಲು ಹಿಡಿದು ಸೆಲ್ಪಿ ತೆಗೆದುಕೊಳ್ಳುತ್ತಿದ್ದ ಯುವಕನೊಬ್ಬ ಮೊಬೈಲ್ ಬಟನ್ ಒತ್ತುವ ಬದಲು ಪಿಸ್ತೂಲಿನ ಟ್ರಿಗರ್ ಒತ್ತಿದ ಪರಿಣಾಮ ಗುಂಡು ತಗುಲಿ ಮೃತಪಟ್ಟಿದ್ದಾನೆ. ದೆಹಲಿಯ ರೋಹಿಣಿ ಪ್ರದೇಶದಲ್ಲಿ ಈ ಅವಘಡ ಸಂಭವಿಸಿದೆ.

ರೋಹಿಣಿ ಪ್ರದೇಶದ ನಿವಾಸಿ 23 ವರ್ಷದ ವಿಜಯ್ ಮೃತ ಯುವಕ. ತನ್ನ ಸಂಬಂಧಿ ಜತೆ ನೆಲೆಸಿದ್ದ ವಿಜಯ್ ಸಾವನ್ನಪ್ಪಿದ ಬಳಿಕ ಈತನ ಸ್ನೇಹಿತ ಭಯದಿಂದ ಓಡಿಹೋಗಿದ್ದ. ವಿಜಯ್ನ ಪಾಲಕರು ಗೆಳೆಯನೇ ಹತ್ಯೆ ಮಾಡಿದ್ದಾನೆಂದು ಆರೋಪಿಸಿದ್ದರು. ಆದರೆ ಮೊಬೈಲ್ ಪರಿಶೀಲಿಸಿದಾಗ ಪಿಸ್ತೂಲ್​ನೊಂದಿಗೆ ಇಬ್ಬರೂ ಸೆಲ್ಪಿ ತೆಗೆದುಕೊಂಡಿರುವುದು ದೃಢಪಟ್ಟಿದೆ.

Comments are closed.