ರಾಷ್ಟ್ರೀಯ

ಅಸ್ಥಿಪಂಜರ ಮೂಲಕ ಕೊಲೆ ರಹಸ್ಯ ಭೇದಿಸಿದ ಕೊಚ್ಚಿ ಪೊಲೀಸರು

Pinterest LinkedIn Tumblr


ಕೊಚ್ಚಿ: ಇಲ್ಲಿನ ಕುಮಾಬಾಲಂ ದ್ವೀಪದಲ್ಲಿ ಸಿಕ್ಕ ಅಸ್ಥಿಪಂಜರ ಮೂಲಕ ಪೊಲೀಸರು ಕೊಲೆ ರಹಸ್ಯವನ್ನು ಭೇದಿಸಿದ್ದಾರೆ.

ಪನಾನ್‌ಗಡ ಪೊಲೀಸರು ಜಾಡು ಹಿಡಿದು ಕೊಲೆಗಾರನನ್ನು ಪತ್ತೆ ಹಚ್ಚಿದ್ದಾರೆ.

ಪೊಲೀಸರು ಪ್ರಕಾರ ದ್ವೀಪದಲ್ಲಿ ಸಿಕ್ಕಿರುವ ಅಸ್ಥಿಪಂಜರ ಶಕುಂತಲಾ ಎಂಬ ಮಹಿಳೆಯದ್ದಾಗಿದೆ. ಈಕೆಯನ್ನು ಸಾಜಿತ್‌ ಎಂಬ ವ್ಯಕ್ತಿ ಕೊಲೆ ಮಾಡಿದ್ದ.

ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ಶಕುಂತಲಾ ಪುತ್ರಿ ಹಾಗೂ ಸಾಜಿತ್‌ ಹಲವು ದಿನಗಳಿಂದಲೂ ಪ್ರೀತಿ ಮಾಡುತ್ತಿದ್ದರು. ಆದರೆ ಇದಕ್ಕೆ ಶಕುಂತಲಾ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಸಾಜಿತ್‌ನನ್ನು ಶಕುಂತಲಾ ಕರೆಸಿ ಬೈದು ಕಳುಹಿಸಿದ್ದರು. ಇದರಿಂದ ಕುಪಿತಗೊಂಡ ಸಾಜಿತ್‌ ಶಕುಂತಲಾ ಹತ್ಯೆಗೆ ಸಂಚು ರೂಪಿಸಿದ.

ಅದರಂತೆ ಆಕೆಯನ್ನು ಕೊಲೆ ಮಾಡಿ ಪ್ಲಾಸ್ಟಿಕ್‌ ಬ್ಯಾರೆಲ್‌ನಲ್ಲಿ ಹಾಕಿ ನಂತರ ಸಿಮೆಂಟ್‌ನಿಂದ ಮುಚ್ಚಿ ಹಾಕಿದ್ದಾನೆ. ಅದನ್ನು ಕುಮಾಬಾಲಂ ದ್ವೀಪದ ವೆಂಬಾನಾಡ್ ಕೆರೆಯಲ್ಲಿ ಬಿಸಾಡಿದ್ದಾನೆ.

ಎರಡು ತಿಂಗಳ ಹಿಂದೆ ಮೀನುಗಾರರು ಕೆರೆಗೆ ಕಾಯಕಲ್ಪ ನೀಡುವ ಕಾಮಗಾರಿ ಕೈಗೊಂಡಾಗ ಈ ಪ್ಲಾಸ್ಟಿಕ್‌ ಬ್ಯಾರೆಲ್‌ನಿಂದ ಕೊಳೆತ ವಾಸನೆ ಬರುತ್ತಿತ್ತು. ಕೂಡಲೇ ಮೀನುಗಾರರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ನಂತರ ಶಕುಂತಲಾ ಮೃತದೇಹದ ಡಿಎನ್‌ಎ ಪರೀಕ್ಷೆಗೊಳಪಡಿಸಿದಾಗ ಮಾಹಿತಿ ದೊರೆಯಿತು. ಆ ನಂತರ ತನಿಖೆ ನಡೆಸಿದಾಗ ಪೊಲೀಸರಿಗೆ ಕೊಲೆ ಮಾಡಿರುವುದು ಪತ್ತೆಯಾಗಿದೆ.

ಒಟ್ಟಾರೆ ಘಟನೆಯ ಭೀತಿಯಿಂದಾಗಿ ಸಾಜಿತ್‌ ಆತ್ಮಹತ್ಯೆ ಮಾಡಿಕೊಂಡರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

Comments are closed.