
ಅಜಮ್‌ಗಡ(ಉತ್ತರ ಪ್ರದೇಶ): ಮಹಾ ಪುರುಷರ ಪ್ರತಿಮೆ ಧ್ವಂಸಗೊಳಿಸುವ ಕೃತ್ಯ ಶನಿವಾರ ಕೂಡ ಮುಂದುವರಿದಿದೆ. ಉತ್ತರ ಪ್ರದೇಶ ಅಜಮ್‌ಗಡದಲ್ಲಿ ನಿಂತಿರುವ ಭಂಗಿಯಲ್ಲಿ ಇದ್ದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಪುತ್ಥಳಿಯ ರುಂಡವನ್ನೇ ದುಷ್ಕರ್ಮಿಗಳು ಇಂದು ಹೊಡೆದು ಉರುಳಿಸಿದ್ದಾರೆ.
ವಿಷಯ ತಿಳಿದ ತಕ್ಷಣ, ಪೊಲೀಸರು ಸ್ಥಳಕ್ಕೆ ಬಂದು ಸ್ಥಳೀಯರನ್ನು ವಿಚಾರಿಸುತ್ತಿದ್ದಾರೆ ಎಂದು ಎಎನ್‌ಐ ಸುದ್ದಿ ಸಂಸ್ಥೆ ಟ್ವೀಟ್ ಮಾಡಿದೆ.
ತ್ರಿಪುರದ ರಾಜ್ಯ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಜಯಗಳಿಸಿದ ಬಳಿಕ ಅಲ್ಲಿದ್ದ ಲೆನಿನ್ ಪ್ರತಿಮೆಯನ್ನು ಕಿಡಿಗೇಡಿಗಳು ಕೆಡವಿದ್ದರು. ಆ ಘಟನೆಯ ತರುವಾಯ ರಾಷ್ಟ್ರದ ಮಹನೀಯರ ಪುತ್ಥಳಿಗಳಿಗೆ ಹಾನಿ ಮಾಡುವ ಕೃತ್ಯಗಳು ದೇಶದ ಹಲವೆಡೆ ನಡೆಯುತ್ತಲೇ ಇವೆ.
Comments are closed.