ರಾಷ್ಟ್ರೀಯ

ಈತ ಗ್ರಾಮ ಲೆಕ್ಕಾಧಿಕಾರಿ…ಮನೆಯಲ್ಲಿ ಸಿಕ್ಕಿದ್ದು ಬರೋಬರಿ 100 ಕೋಟಿ ರೂಪಾಯಿ ಅಕ್ರಮ ಆಸ್ತಿ !

Pinterest LinkedIn Tumblr

ಹೈದರಾಬಾದ್‌: ಈತನ ಹುದ್ದೆ ಗ್ರಾಮ ಲೆಕ್ಕಾಧಿಕಾರಿ. ಆದರೆ ಈತನ ಆಸ್ತಿಯನ್ನು ಕಂಡರೆ ಎಲ್ಲರೂ ದಂಗಾಗುತ್ತಾರೆ.

ವಿಶಾಖಪಟ್ಟಣಂನ ಮಲ್ಕಪುರಂ ಮಂಡಲದಲ್ಲಿ ಗ್ರಾಮೀಣ ಲೆಕ್ಕಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಸಂಜೀವ್‌ ಕುಮಾರ್‌ ಮನೆ, ಕಚೇರಿ ಮೇಲೆ ದಾಳಿ ನಡೆಸಿದ ಭ್ರಷ್ಟಾಚಾರ ನಿಗ್ರಹ ದಳ ಅಧಿಕಾರಿಗಳು 100 ಕೋಟಿ ರೂಪಾಯಿಗೂ ಅಧಿಕ ಮೊತ್ತದ ಅಕ್ರಮ ಆಸ್ತಿಯನ್ನು ಪತ್ತೆ ಹಚ್ಚಿದ್ದಾರೆ.

2008ರಲ್ಲಿ ಗ್ರಾಮ ಲೆಕ್ಕಾಧಿಕಾರಿಯಾಗಿ ಸೇರಿಕೊಂಡ ಸಂಜೀವ್‌ ಕುಮಾರ್‌ ಹಲವಾರು ಗ್ರಾಮಗಳಲ್ಲಿ ಕಾರ್ಯ ನಿರ್ವಹಿಸಿದ್ದರು.

ಎರಡು ದಿನಗಳ ಹಿಂದೆ ಸಂಜೀವ್‌ ಕುಮಾರ್‌ ಮನೆ ಮೇಲೆ ದಾಳಿ ನಡೆಸಿದ ಭ್ರಷ್ಟಾಚಾರ ನಿಗ್ರಹ ದಳ ಅಧಿಕಾರಿಗಳು ತೀವ್ರ ತಪಾಸಣೆ ನಡೆಸಿದರು.

ವಿಶಾಖಪಟ್ಟಣಂನಲ್ಲಿ ಪ್ರತ್ಯೇಕ ರಿಯಲ್‌ ಎಸ್ಟೇಟ್‌ ಕಚೇರಿ ಹೊಂದಿರುವ ಸಂಜೀವ್ ಕುಮಾರ್‌ ಹಲವಾರು ಡೀಲ್‌ಗಳನ್ನು ಕುದುರಿಸಿ ಕೋಟಿ ಕೋಟಿ ಹಣವನ್ನು ಅಕ್ರಮವಾಗಿ ಸಂಪಾದಿಸಿದ್ದಾರೆ.

ವಿಜಯನಗರಂನಲ್ಲಿ 200 ಎಕರೆ ಜಮೀನಿದ್ದು, ಅಲ್ಲಿ ಸಂಜೀವಿನಿ ವನಂ ಅನ್ನು ಆರಂಭಿಸುತ್ತಿದ್ದಾರೆ. ಆದಿತ್ಯ ವರ್ಧನ್‌ ಬಿಲ್ಡರ್‌ ಹೆಸರಿನ ಮತ್ತೊಂದು ಸಂಸ್ಥೆಯನ್ನೂ ಸಂಜೀವ್‌ ಹೊಂದಿದ್ದಾರೆ.

ಮನೆಯಲ್ಲಿಯೇ ಕೋಟ್ಯಂತರ ರೂಪಾಯಿ ನಗದು ಹಾಗೂ ಚಿನ್ನಾಭರಣ, ಪ್ರಮುಖ ದಾಖಲೆ, ಸಹಿ ಮಾಡಿದ ಖಾಲಿ ಚೆಕ್‌ಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಮಂಗಳವಾರವೂ ದಾಳಿ ಮುಂದುವರಿದಿದೆ. ಆಂಧ್ರ, ತೆಲಂಗಾಣ ರಾಜ್ಯದಲ್ಲೂ ಆಸ್ತಿಪಾಸ್ತಿ ಹೊಂದಿರುವ ಬಗ್ಗೆ ಮಾಹಿತಿ ದೊರೆತಿದ್ದು ತಪಾಸಣೆ ನಡೆಸಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Comments are closed.