ರಾಷ್ಟ್ರೀಯ

ತ್ರಿಪುರದಲ್ಲಿ ಬಿಜೆಪಿ ‘ಹಣ ಬಲ’ದಿಂದ ಗೆಲುವು ಸಾಧಿಸಿದೆ: ಸಿಪಿಐ(ಎಂ) ಆರೋಪ

Pinterest LinkedIn Tumblr


ಅಗರ್ತಾಲ: ತ್ರಿಪುರ ವಿಧಾನಸಭೆ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ(ಬಿಜೆಪಿ) ಭರ್ಜರಿ ಗೆಲುವು ಸಾಧಿಸಿದ್ದು, ಬಿಜೆಪಿ ಗೆಲುವಿಗೆ ಹಣ ಬಲ ಕಾರಣ ಎಂದು ಸಿಪಿಐ(ಎಂ) ಶನಿವಾರ ಆರೋಪಿಸಿದೆ.

ಬಿಜೆಪಿ ಹಣ ಮತ್ತು ಇತರ ಸಂಪನ್ಮೂಲಗಳನ್ನು ಭಾರಿ ಪ್ರಮಾಣದಲ್ಲಿ ಬಳಸಿಕೊಂಡು ಮತದಾರರ ಮೇಲೆ ಪ್ರಭಾವ ಬೀರಿದೆ. ಈ ಮೂಲಕ ಪ್ರಮುಖ ಪ್ರತಿಪಕ್ಷ ಕಾಂಗ್ರೆಸ್ ಮತಗಳನ್ನು ಸಂಪೂರ್ಣ ಪಡೆದುಕೊಂಡಿದೆ ಎಂದು ಸಿಪಿಐ(ಎಂ) ಪ್ರಕಟಣೆಯಲ್ಲಿ ತಿಳಿಸಿದೆ. ಅಲ್ಲದೆ ತಮ್ಮ ಪಕ್ಷಕ್ಕೆ ಮತ ನೀಡಿದ ಶೇ.45ರಷ್ಟು ಮತದಾರರಿಗೆ ಸಿಪಿಐ(ಎಂ) ಧನ್ಯವಾದ ಹೇಳಿದೆ.

ತ್ರಿಪುರಾದಲ್ಲಿ 25 ವರ್ಷಗಳಿಂದ ಅಧಿಕಾರದಲ್ಲಿದ್ದ ಸಿಪಿಐ(ಎಂ) ಅನ್ನು ಕಿತ್ತೊಗೆದು ಬಿಜೆಪಿ ಅಧಿಕಾರಕ್ಕೆ ಬಂದಿದ್ದು, ಈಗ ಕೇರಳದಲ್ಲಿ ಮಾತ್ರ ಎಡಪಕ್ಷ ಅಧಿಕಾರದಲ್ಲಿದೆ.

Comments are closed.