ರಾಷ್ಟ್ರೀಯ

ಪತ್ನಿ ತಡವಾಗಿ ಏಳುತ್ತಾಳೆ, ರುಚಿಯಾಗಿ ಅಡುಗೆ ಮಾಡುವುದಿಲ್ಲ ಎಂಬ ಕಾರಣಕ್ಕೆ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ಪತಿ ! ಕೋರ್ಟ್ ಹೇಳಿದ್ದೇನು..?

Pinterest LinkedIn Tumblr

ಮುಂಬೈ: ಪತ್ನಿ ತಡವಾಗಿ ಏಳುತ್ತಾಳೆ, ರುಚಿಕಟ್ಟಾದ ಅಡುಗೆ ಮಾಡುವುದಿಲ್ಲ ಎಂಬ ಕ್ಷುಲ್ಲಕ್ಕ ಕಾರಣಕ್ಕೆ ಪತಿ ವಿಚ್ಛೇದನ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಬಾಂಬೆ ಹೈಕೋರ್ಟ್ ವಜಾಗೊಳಿಸಿದೆ.

ಪತಿ ಸಂತಕ್ರಾಜ್ ಮುಂಬೈ ನಿವಾಸಿ. ಈತ ಪತ್ನಿಯು ತನ್ನ ಕರ್ತವ್ಯವನ್ನು ಸಮರ್ಥವಾಗಿ ನಿರ್ವಹಿಸುತ್ತಿಲ್ಲ ಎಂಬ ಕಾರಣ ನೀಡಿ ವಿಚ್ಚೇದನ ಕೇಳಿದ್ದನು.

ಸಂತಕ್ರಾಜ್‌ನ ಅರ್ಜಿಯನ್ನು ಪರಿಶೀಲಿಸಿದ ಬಾಂಬೆ ಹೈಕೋರ್ಟ್‌ನ ನ್ಯಾಯಾಧೀಶರಾದ ಕೆ.ಕೆ.ಟೇಟೆಡ್ ಹಾಗೂ ಸರಾಂಗ್ ಕೊತ್ವಾಲ್ ಅವರು ಅರ್ಜಿಯನ್ನು ವಜಾಗೊಳಿಸಿ ಕೌಟುಂಬಿಕ ನ್ಯಾಯಾಲಯದ ತೀರ್ಪನ್ನು ಎತ್ತಿಹಿಡಿದಿದ್ದಾರೆ. ಅಲ್ಲದೆ ಇದು ಕ್ರೂರ ಸಂಗತಿಯಲ್ಲ ಎಂದು ಹೇಳಿದ್ದಾರೆ.

ಪತ್ನಿಯು ರುಚಿಯಾಗಿ ಹಾಗೂ ಸಾಕಷ್ಟು ಅಡುಗೆ ಮಾಡುವುದಿಲ್ಲ. ಆಕೆ ನನ್ನೊಟ್ಟಿಗೆ ಸಮಯ ಕಳೆಯುವುದಿಲ್ಲ. ನಾನು ಕಚೇರಿಯಿಂದ ತಡವಾಗಿ ಬಂದಾಗ ಒಂದು ಲೋಟ ನೀರನ್ನೂ ಕೊಡುವುದಿಲ್ಲ. ಸಂಜೆ 6ಕ್ಕೆ ಮನೆಗೆ ಬಂದರೂ 8.30ರವರೆಗೆ ಅಡುಗೆ ಮಾಡುವುದಿಲ್ಲ ಎಂದು ಅರ್ಜಿದಾರ ಸಂತಕ್ರಾಜ್ ಹೇಳಿದ್ದಾರೆ.

ಪತಿ ಹೊರಿಸಿದ ಆರೋಪವನ್ನು ತಳ್ಳಿಹಾಕಿರುವ ಪತ್ನಿಯು, ನಾನು ಕೆಲಸಕ್ಕೆ ಹೋಗುವ ಮೊದಲು ಇಡೀ ಕುಟುಂಬಕ್ಕೆ ಅಡುಗೆ ಮಾಡಿಯೇ ಹೋಗುತ್ತೇನೆ ಎಂದು ನ್ಯಾಯಾಲಯಕ್ಕೆ ಹೇಳಿದ್ದಾರೆ.

Comments are closed.