ನವದೆಹಲಿ: ಯುಪಿಎ ಅವಧಿಯಲ್ಲಿ ಜಾರಿಯಾಗಿದ್ದ “80:20 ಚಿನ್ನದ ಯೋಜನೆ’ಯಲ್ಲಿ ಅವರ ಪಾತ್ರದ ಬಗ್ಗೆ ಸಂಸತ್‌ನ ಸಾರ್ವಜನಿಕ ಲೆಕ್ಕ ಪತ್ರ ಸಮಿತಿಯ ಬಿಜೆಪಿ ಸದಸ್ಯ ನಿಶಿಕಾಂತ್ ದುಬೆ ಪ್ರಶ್ನೆ ಮಾಡಿದ್ದಾರೆ.
ಯೋಜನೆಯನ್ನು ಸದ್ಯ ಪರಾರಿಯಾಗಿರುವ ಗೀತಾ ಜ್ಯುವೆಲ್ಲರ್ಸ್ ಪ್ರವರ್ತಕ ಮೆಹುಲ್ ಚೋಸ್ಕಿ ಸೇರಿ ಹಲವರು ದುರುಪಯೋಗ ಮಾಡಿ ಅಕ್ರಮ ಹಣ ವರ್ಗಾವಣೆ ಮಾಡಿರುವ ಸಾಧ್ಯತೆ ಇದೆ ಎಂಬ ಶಂಕೆ ವ್ಯಕ್ತವಾಗಿದೆ. ಚಿದಂಬರಂ ಹಣಕಾಸು ಸಚಿವರಾಗಿರುವ ವೇಳೆ ಈ ಯೋಜನೆ ಜಾರಿಯಾಗಿದ್ದರಿಂದ ಅವರೇ ಈ ಬಗ್ಗೆ ಪ್ರತಿಕ್ರಿಯಿಸಲು ಸಾಧ್ಯ ಎಂಬ ಅಭಿಪ್ರಾಯವೂ ಸಭೆಯಲ್ಲಿ ವ್ಯಕ್ತವಾಯಿತು.
ದುಬೆ ನೇತೃತ್ವದ ಉಪ ಸಮಿತಿಯ ಮುಂದೆ ಕಂದಾಯ ಕಾರ್ಯದರ್ಶಿ ಮತ್ತು ಜಾರಿ ನಿರ್ದೇಶನಾಯದ ಹಿರಿಯ ಅಧಿಕಾರಿಗಳು, ಸಿಬಿಡಿಟಿ ಸದಸ್ಯರು ಹಾಜರಾಗಿದ್ದ ವೇಳೆ ಈ ಬಗ್ಗೆ ಪ್ರಶ್ನೆ ಮಾಡಲಾಗಿದೆ.
-ಉದಯವಾಣಿ