ರಾಷ್ಟ್ರೀಯ

ಸಂಸತ್ ಸದಸ್ಯರ ಭತ್ಯೆ ಹೆಚ್ಚಳಕ್ಕೆ ಸಚಿವ ಸಂಪುಟ ಅನುಮೋದನೆ

Pinterest LinkedIn Tumblr


ನವದೆಹಲಿ: ಸಂಸದರ ವೇತನ ಹೆಚ್ಚಳ ಪ್ರಸ್ತಾಪಕ್ಕೆ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ. ಇದರಂತೆ ಸಂಸದರ ಕ್ಷೇತ್ರ ಭತ್ಯೆ, ವಸತಿ, ದೂರವಾಣಿ ಭತ್ಯೆ, ಕಛೇರಿ ವೆಚ್ಚಗಳಲ್ಲಿ ಏರಿಕೆ ಆಗಲಿದೆ.

ಸಂಸದರ ಕ್ಷೇತ್ರದ ಭತ್ಯೆಯನ್ನು ಈಗಿರುವ 45 ಸಾವಿರದಿಂದ 60 ಸಾವಿರಕ್ಕೆ ಹೆಚ್ಚಳ ಹೆಚ್ಚಳ ಮಾಡಬೇಕು, ಪೀಠೋಪಕರಣಗಳ ಭತ್ಯೆಯನ್ನು 75 ಸಾವಿರದಿಂದ 1 ಲಕ್ಷ ರೂಪಾಯಿಗೆ ಹೆಚ್ಚಳ ಮಾಡಬೇಕೆಂದು ಸಂಸದೀಯ ವ್ಯವಹಾರಗಳ ಸಚಿವಾಲಯ ಪ್ರಸ್ತಾವನೆ ಸಲ್ಲಿಸಿದ್ದಿತು.

ಇದೀಗ ಪ್ರಸ್ತಾವನೆಗಳಿಗೆ ಸಂಪುಟವು ಒಪ್ಪಿಗೆಯ ಮುದ್ರೆಯನ್ನೊತ್ತಿದ್ದು ಇದರ ಅನುಸಾರ ಸಂಸದರೊಬ್ಬರು ಮಾಸಿಕ 50 ಸಾವಿರ ಮೂಲ ವೇತನ, 45 ಸಾವಿರ ಕ್ಷೇತ್ರ ಭತ್ಯೆ, ವಸತಿ, ದೂರವಾಣಿ ಇನ್ನಿತರೆ ಮೂಲಭೂತ ಅಗತ್ಯಗಳ ಭತ್ಯೆ ಸೇರಿತಿಂಗಳಿಗೆ 2.7 ಲಕ್ಷ ರೂ. ಪಡೆಯಲಿದ್ದಾರೆ.

ದೇಶದಲ್ಲಿ ಒಟ್ಟು 775 ಸಂಸದರಿದ್ದು ಇದರಲ್ಲಿ ಲೋಕಸಭೆಯಲ್ಲಿ 536, ರಾಜ್ಯಸಭೆಯಲ್ಲಿ 239 ಸಂಸದರಿರುವರು..

Comments are closed.