ರಾಷ್ಟ್ರೀಯ

ಕಂಚಿ ಶಂಕರಾಚಾರ್ಯ ಜಯೇಂದ್ರ ಸರಸ್ವತಿ ವಿಧಿವಶ

Pinterest LinkedIn Tumblr


ಕಂಚೀಪುರಂ: ಕಂಚೀಪುರದ ಕಾಮಕೋಟಿ ಮಠದ ಶಂಕರಾಚಾರ್ಯರಾದ ಜಯೇಂದ್ರ ಸರಸ್ವತಿಯವರು ನಿಧನರಾಗಿದ್ದಾರೆ. ಮಠಾಧೀಶರಿಗೆ 82 ವರ್ಷ ವಯಸ್ಸಾಗಿತ್ತು.
1954ರಿಂದ ಕಂಚಿ ಕಾಮಕೋಟಿ ಮಠದ ಪೀಠಾಧ್ಯಕ್ಷರಾಗಿದ್ದ ಶ್ರೀಗಳು ಇಂದು ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ.
ಸಮಸ್ಯೆಯಿಂದ ಬಳಲುತ್ತಿದ್ದ ಶ್ರೀಗಳನ್ನು ಚೆನ್ನೈನ ಶಂಕರ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗ್ಗೆ ಕೊನೆಯುಸಿ ರೆಳೆದಿದ್ದಾರೆ. ಶ್ರೀ ಗಳು ಕೇವಲ 19 ವರ್ಷದವರಿದ್ದ ಸಂದರ್ಭ ಮಠಾಧೀಶರಾಗಿ ಆಯ್ಕೆಯಾಗಿದ್ದರು. ಅಲ್ಲದೇ ಅಯೋಧ್ಯೆ ಸೇರಿದಂತೆ ದೇಶದಲ್ಲಿ ಹಿಂದು ಧರ್ಮಕ್ಕೆ ಸಂಬಂಧಿಸಿದ ವಿಚಾರಗಳ ಕುರಿತಂತೆ ಸಾಕಷ್ಟು ಪ್ರಭಾವ ಹೊಂದಿ ದ್ದರು.
ತಮ್ಮ ಸಮಕಾಲೀನರ ಪೈಕಿ ಸರಸ್ವತಿ ಅತ್ಯಂತ ಹೆಚ್ಚು ಪ್ರಭಾವ ಬೀರಿದ್ದ ಧಾರ್ಮಿಕ ಗುರುಗಳಲ್ಲಿ ಒಬ್ಬರಾಗಿದ್ದರು. ಸುಬ್ರಹ್ಮಣ್ಯ ಮಹದೇವ ಐಯ್ಯರ್‌ ಎಂಬ ಹುಟ್ಟು ನಾಮ ಹೊಂದಿದ್ದ ಸರಸ್ವತಿ ತೀರ್ಥರು ಜುಲೈ 18, 1935ರಲ್ಲಿ ಜನಿಸಿದ್ದಾರೆ. ಪ್ರತಿಷ್ಠಿತ ಕಂಚಿ ಮಠದ 69ನೇ ಮುಖ್ಯಸ್ಥರಾಗಿ ಹಾಗು ಚಂದ್ರಶೇಖರ ಸರಸ್ವತಿ ತೀರ್ಥರ ಅಡಿಯಾಳಾಗಿ 1954ರಲ್ಲಿ ಹಿಂದು ಧಾರ್ಮಿಕ ರಂಗ ದಲ್ಲಿ ಜಯೇಂದ್ರರು ಪ್ರವರ್ಧಮಾನಕ್ಕೆ ಬಂದರು.
1994ರಲ್ಲಿ ಮಠದ ಉನ್ನತಾಧಿಕಾರ ಪಡೆದ ಬಳಿಕ ಆಧ್ಯಾತ್ಮಿಕ ಹಾಗು ಆರ್ಥಿಕ ಶಕ್ತಿ ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಹಲವಾರು ಆಸ್ಪತ್ರೆಗಳು ಹಾಗು ಶಿಕ್ಷಣ ಸಂಸ್ಥೆಗಳನ್ನು ಶ್ರೀಗಳು ಆರಂಭಿಸಿದರು. ಒಂದು ಕಾಲದಲ್ಲಿ ಶ್ರೀಗಳು ಅಯೋಧ್ಯೆ ವಿವಾದದ ವಿಚಾರವಾದ ಮಾತುಕತೆ ಮೇಲೆ ಎಷ್ಟು ಪ್ರಭಾವ ಹೊಂದಿದ್ದರೆಂದರೆ ಅಂದಿನ ದಿನಗಳಲ್ಲಿ ತಮಿಳು ನಾಡಿಗೆ ಭೇಟಿ ನೀಡುವ ಯಾವುದೇ ಕೇಂದ್ರ ಸಚಿವ, ಪ್ರಧಾನ ಮಂತ್ರಿ ಹಾಗು ರಾಷ್ಟ್ರಪತಿಗಳು ಸರಸ್ವತಿಯವರನ್ನು ಭೇಟಿಯಾಗುತ್ತಿದ್ದರು.
2004ರ‍ಲ್ಲಿ ಕಂಚಿ ಪೀಠಕ್ಕೆ ಕಪ್ಪು ಚುಕ್ಕಿಯೊಂದು ಅಂಟಿಕೊಂಡಿತು. ಶಂಕರರಾಮನ್‌ ಕೊಲೆ ಪ್ರಕರಣದಲ್ಲಿ ಜಯೇಂದ್ರ ಸರಸ್ವತಿರನ್ನು ಬಂಧಿಸಲಾಯಿತು.ಕಂಚೀಪುರಂನ ವರದರಾಜ ಪೆರುಮಾಳ್‌ ದೇವಸ್ಥಾನದಲ್ಲಿ ನಿರ್ವಾಹಕರಾಗಿದ್ದ ವರದರಾಜ ಪೆರುಮಾಳ್‌ರನ್ನು 2004ರ ನವೆಂಬರ್‌ 11ರಂದು ಬಂಧಿಸಲಾಯಿತು.
ಜನವರಿ 2005ರವರೆಗೆ ಕಾರಾಗೃಹದಲ್ಲಿದ್ದ ಆಚಾರ್ಯರನ್ನು ಬಳಿಕ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು. ಆಚಾ ರ್ಯರು ಹಾಗು ಇನ್ನಿತರರ ಮೇಲೆ ಕೇಳಿ ಬಂದಿದ್ದ ಆಪಾದನೆಯಿಂದ 2013ರಲ್ಲಿ ಪುದುಚೆರಿ ನ್ಯಾಯಾಲಯ ದೋಷಮುಕ್ತ ರನ್ನಾಗಿ ಮಾಡಿತ್ತು. ಜಯೇಂದ್ರ ಸರಸ್ವತಿ ಹಾಗು ಕಿರಿಯ ಮಠಾಧೀಶ ವಿಜಯೇಂದ್ರ ಸರಸ್ವತಿ ಬಂಧನದ ಕಾರಣ ಮಠದ ವರ್ಚಸ್ಸಿನ ಮೇಲೆ ಕುಂದುಂಟಾಗಿ ಕೆಲ ವರ್ಷಗಳ ಕಾಲ ಅಲ್ಲಿಗೆ ಗಣ್ಯರು ಭೇಟಿ ನೀಡುವುದನ್ನು ನಿಲ್ಲಿಸಿದ್ದರು.
ಹಿಂದಿನ ರಾಷ್ಟ್ರಪತಿ ಪ್ರಣಬ್‌ ಮುಖರ್ಜಿ ಅಧಿಕಾರದಿಂದ ಕೆಳಗಿಳಿಯುವ ಕೆಲವೇ ದಿನಗಳ ಮುನ್ನ ಮಠಕ್ಕೆ ಭೇಟಿ ನೀಡುವ ಮೂಲಕ ಮಠಕ್ಕೆ ಮತ್ತೊಮ್ಮೆ ಕಳೆ ಬರುವಂತೆ ಮಾಡಿದ್ದರು.

Comments are closed.