ರಾಷ್ಟ್ರೀಯ

ಛೀ..ಸಿಂಹಗಢ್ ಕೋಟೆ ಮೇಲೆ ನಿಂತು ಈ ವ್ಯಕ್ತಿ ಮಾಡಿದ್ದೇನು ಗೊತ್ತಾ?!

Pinterest LinkedIn Tumblr


ಪುಣೆ: ಧಾರ್ಮಿಕ ಭಾವನೆಗೆ ಧಕ್ಕೆ ತಂದ ಆರೋಪದಡಿಯಲ್ಲಿ ಪುಣೆಯ ದೂರದರ್ಶನ ಉದ್ಯೋಗಿಯೊಬ್ಬರ ಮೇಲೆ ಪೊಲೀಸರು ದೂರು ದಾಖಲಿಸಿಕೊಂಡಿರುವ ಪ್ರಕರಣ ನಡೆದಿದೆ. ಅದಕ್ಕೆ ಕಾರಣ ಈ ವ್ಯಕ್ತಿ ಪುಣೆಯ ಮುಖ್ಯ ಪ್ರವಾಸಿ ತಾಣವಾದ ಸಿಂಹಗಢ್ ಕೋಟೆಯ ಮೇಲೆ ನಗ್ನವಾಗಿ ಸೂರ್ಯಸ್ನಾನ(ಸನ್ ಬಾತ್) ಮಾಡಿದ್ದು!

ಮಿಡ್ ಡೇ ವರದಿ ಪ್ರಕಾರ, ದೂರದರ್ಶನ ಉದ್ಯೋಗಿಯೊಬ್ಬರು ಕೋಟೆಯ ಮೇಲೆ ನಗ್ನವಾಗಿ ಸೂರ್ಯಸ್ನಾನ ಮಾಡುತ್ತಿದ್ದು ಈ ಸಂದರ್ಭದಲ್ಲಿ ಕೆಲವು ಪ್ರವಾಸಿಗರು ಬಟ್ಟೆಯನ್ನು ಹಾಕಿಕೊಳ್ಳುವಂತೆ ಹೇಳಿದರೂ ಕೂಡಾ ನಿರಾಕರಿಸಿರುವುದಾಗಿ ತಿಳಿಸಿದೆ.

ಈ ಹಿನ್ನೆಲೆಯಲ್ಲಿ ಪ್ರವಾಸಿಗರು ಹಾಗೂ ಕೋಟೆಯನ್ನು ಸ್ವಚ್ಚಗೊಳಿಸುವ ನೌಕರರು ಪೊಲೀಸರಿಗೆ ದೂರು ನೀಡಿರುವುದಾಗಿ ವರದಿ ಹೇಳಿದೆ. ವಾನೋವಾರಿ ನಿವಾಸಿ ಮೇಲೆ ಹವೇಲಿ ಪೊಲೀಸರು ಐಪಿಸಿ ಸೆಕ್ಷನ್ 295ಎ(ಧಾರ್ಮಿಕ ಭಾವನೆಗೆ ಧಕ್ಕೆ) ಹಾಗೂ 509ರ(ಮಹಿಳೆಯರ ಸ್ವಭಾವಕ್ಕೆ ಧಕ್ಕೆ) ಅನ್ವಯ ದೂರು ದಾಖಲಿಸಿಕೊಂಡಿದ್ದಾರೆ.

ತನ್ನ ವೈದ್ಯರು ಡಿ ವಿಟಮಿನ್ ಪಡೆಯಲು ಈ ರೀತಿ ಸ್ನಾನ ಮಾಡಲು ಹೇಳಿರುವುದಾಗಿ ಕಾರಣ ಕೊಟ್ಟಿರುವುದಾಗಿ ವರದಿ ವಿವರಿಸಿದೆ. ಕೆಲವರು ಈ ವೇಳೆ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದು ಅದು ವೈರಲ್ ಆಗಿರುವುದಾಗಿ ಹೇಳಿದೆ. ಈ ವ್ಯಕ್ತಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿರುವುದಾಗಿ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

-ಉದಯವಾಣಿ

Comments are closed.