ನವದೆಹಲಿ: ದ್ವಿಚಕ್ರ ವಾಹನಗಳಿಗೆ ಸೀರೆ ಗಾರ್ಡ್, ಹ್ಯಾಂಡ್ ಗ್ರಿಪ್ ಹಾಗೂ ಇತರ ಭದ್ರತಾ ಸೌಲಭ್ಯಗಳನ್ನು ಸುಪ್ರೀಂಕೋರ್ಟ್ ಕಡ್ಡಾಯಗೊಳಿಸಿದೆ. 2008ರ ಮಧ್ಯಪ್ರದೇಶ ಹೈಕೋರ್ಟ್ ಆದೇಶವನ್ನು ಎತ್ತಿ ಹಿಡಿದ ಸುಪ್ರೀಂಕೋರ್ಟ್, ಹಿಂಬದಿ ಸವಾರರ ಸುರಕ್ಷತೆಗೆ ಈ ಕ್ರಮಗಳು ಕಡ್ಡಾಯ ಎಂದಿದೆ.
ಇದರಿಂದಾಗಿ ದ್ವಿಚಕ್ರ ವಾಹನ ಉತ್ಪಾದಕ ಕಂಪನಿಗಳಿಗೆ ಸಮಸ್ಯೆ ಎದುರಾಗಿದ್ದು, ಹಲವು ಬೈಕ್‌ಗಳ ವಿನ್ಯಾಸವನ್ನೇ ಬದಲಿಸುವ ಅಗತ್ಯ ಉಂಟಾಗಲಿದೆ. 2008ರಲ್ಲಿ ಮ.ಪ್ರ ಹೈಕೋರ್ಟ್ ಆದೇಶದ ವಿರುದ್ಧ ದ್ವಿಚಕ್ರ ವಾಹನ ಉತ್ಪಾದಕರ ಸಂಘಟನೆ ಸಲ್ಲಿಸಿ, ತಡೆಯಾಜ್ಞೆ ತಂದಿತ್ತು.
-ಉದಯವಾಣಿ