ರಾಷ್ಟ್ರೀಯ

ಹಸೀನಿ ಅತ್ಯಾಚಾರ, ಕೊಲೆ ಪ್ರಕರಣ: ಆರೋಪಿ ಟೆಕ್ಕಿ ಧಸ್ವಂತ್ ದೋಷಿ

Pinterest LinkedIn Tumblr

ಚೆನ್ನೈ: ಚಂಗಲ್ ಪೇಟ್ ನ ಮಹಿಳಾ ನ್ಯಾಯಾಲಯವು ಏಳು ವರ್ಷದ ಹಸೀನಿ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಟೆಕ್ಕಿ ಎಸ್.ಧಸ್ವಂತ್ (23) ದೋಷಿ ಎಂದು ತಿರ್ಪು ನೀಡಿದೆ.

ಜನರಿಂದ ತುಂಬಿದ್ದ ನ್ಯಾಯಾಲಯದ ಸಭಾಂಗಣದಲ್ಲಿ ನ್ಯಾಯಾಧೀಶರು ಈ ತೀರ್ಪು ಪ್ರಕಟಿಸಿದ್ದು ಆರೋಪಿ ಎಸ್.ಧಸ್ವಂತ್ ವಿರುದ್ಧ ಪೋಸ್ಕೋ ಕಾಯ್ದೆ ಸೇರಿ ಅನೇಕ ಕಾಯ್ದೆಗಳಡಿಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಕರಣದಲ್ಲಿ ದೊಷಿಯಾಗಿರುವ ಎಸ್.ಧಸ್ವಂತ್ ನ ಶಿಕ್ಷೆ ಪ್ರಮಾಣವನ್ನು ನ್ಯಾಯಾಲಯ ಇನ್ನಷ್ಟೇ ಪ್ರಕಟಿಸಬೇಕಿದೆ.

ಆರೋಪಿ ಧನ್ವಂತ್ ಕಳೆದ ವರ್ಷ ಫೆ.6 ರಂದು ಹಸೀನಿ ಎನ್ನುವ ಏಳುವ ರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಹತ್ಯೆ ಮಾಡಿದ್ದ. ಆ ಬಳಿಕ ಬಾಲಕಿಯ ದೇಹವನ್ನು ಸುಟ್ಟು ಹಾಕಿದ್ದ.

Comments are closed.