ರಾಷ್ಟ್ರೀಯ

ಪ್ರಿಯಾ ಪ್ರಕಾಶ್‌ ವೈರಲ್‌ ಹಾಡು ನಿಷೇಧಕ್ಕೆ ರಜಾ ಅಕಾಡೆಮಿ ಆಗ್ರಹ

Pinterest LinkedIn Tumblr


ಹೊಸದಿಲ್ಲಿ: ಕಣ್‌ ಮಿಂಚಿನ ಇಂಟರ್‌ನೆಟ್‌ ಸೆನ್ಸೇಶನ್‌ ಎನಿಸಿಕೊಂಡಿರುವ ಪ್ರಿಯಾ ಪ್ರಕಾಶ್‌ ವಾರಿಯರ್‌ ವೈರಲ್‌ ಹಾಡಿನ ವಿವಾದಕ್ಕೆ ಕೊನೆಯೇ ಇಲ್ಲವೇನೋ ಎಂದನ್ನಿಸುತ್ತಿದೆ.

ಪ್ರಿಯಾ ಕಾಣಿಸಿಕೊಂಡಿರುವ “ಮಾಣಿಕ್ಯ ಮಲರಾಯ ಪೂವಿ’ ವೈರಲ್‌ ಹಾಡಿನ ವಿರುದ್ದ ಯುವಕರ ಗುಂಪೊಂದು ಹೈದರಾಬಾದ್‌ ಪೊಲೀಸ್‌ ಠಾಣೆಗೆ ದೂರು ನೀಡಿದ ಬಳಿಕ ಇದೀಗ ರಜಾ ಅಕಾಡೆಮಿ ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವೆ ಸ್ಮತಿ ಇರಾನಿ ಅವರಿಗೆ ಪತ್ರ ಬರೆದು ವೈರಲ್‌ ಹಾಡಿನ ಟ್ರ್ಯಾಕಿಗೆ ನಿಷೇಧ ಹೇರುವಂತೆ ಒತ್ತಾಯಿಸಿದೆ.

ಪ್ರಿಯಾ ಪ್ರಕಾಶ್‌ ವಾರಿಯರ್‌ ಅವರ ಚೊಚ್ಚಲ ಒರು ಆದಾರ್‌ ಲವ್‌ ಚಿತ್ರದ “ಮಾಣಿಜ್ಯ ಮಲರಾಯ ಪೂವಿ’ ವೈರಲ್‌ ಹಾಡಿಗೆ ನಿಷೇಧ ಹೇರುವಂತೆ ಕೋರಿ ರಜಾ ಅಕಾಡೆಮಿ ಸಚಿವೆ ಸ್ಮತಿ ಅವರಿಗೆ ಪತ್ರ ಬರೆದು ಒತ್ತಾಯಿಸಿರುವುದಾಗಿ ಎಎನ್‌ಐ ವರದಿ ಮಾಡಿದೆ.

ಈ ಮಲಯಾಳಂ ಹಾಡು ಪ್ರವಾದಿ ಮಹಮ್ಮದರು ಮತ್ತು ಅವರ ಪತ್ನಿಯನ್ನು ಅವಮಾನಿಸುವಂತಿದೆ ಎಂದು ರಜಾ ಆಕಾಡೆಮಿ ಆರೋಪಿಸಿದೆ.

-ಉದಯವಾಣಿ

Comments are closed.