ಥಾಣೆ : 2015ರಲ್ಲಿ ಐದು ವರ್ಷ ಪ್ರಾಯದ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಅಪರಾಧಕ್ಕಾಗಿ ನವೀ ಮುಂಬಯಿಯ ಜುಹುಗಾಂವ್ ನಿವಾಸಿಯಾಗಿರುವ 35 ವರ್ಷ ಪ್ರಾಯದ ನಿತಿನ್ ಸತ್ಪಾಲ್ ಎಂಬ ವ್ಯಕ್ತಿಗೆ ಸ್ಥಳೀಯ ನ್ಯಾಯಾಲಯ ಐದು ವರ್ಷಗಳ ಕಠಿನ ಜೈಲು ಶಿಕ್ಷೆಯನ್ನು ವಿಧಿಸಿದೆ.
ಜಿಲ್ಲಾ ನ್ಯಾಯಾಧೀಶ ಮತ್ತು ಹೆಚ್ಚುವರಿ ಸೆಶನ್ಸ್ ನ್ಯಾಯಾಧೀಶರಾಗಿರುವ ಪಿ ಪಿ ಜಾಧವ್ ಅವರು ಅಪರಾಧಿಗೆ 10,000 ರೂ. ದಂಡವನ್ನೂ ವಿಧಿಸಿದರು.
ವಾಶಿಯ ಜುಹುಗಾಂವ್ ನಿವಾಸಿಯಾಗಿರುವ ಅಪರಾಧಿ ಸತ್ಪಾಲ್ ಮತ್ತು ಆತನಿಂದ ಲೈಂಗಿಕ ದೌರ್ಜನ್ಯಕ್ಕೆ ಗುರಿಯಾದ ಬಾಲಕನು ನೆರೆಕರೆಯವರಾಗಿದ್ದರು ಎಂದು ಪಬ್ಲಿಕ್ ಪ್ರಾಸಿಕ್ಯೂಟರ್ ವಿನೀತ್ ಕುಲಕರ್ಣಿ ನ್ಯಾಯಾಲಯಕ್ಕೆ ತಿಳಿಸಿದರು.
-ಉದಯವಾಣಿ