ರಾಷ್ಟ್ರೀಯ

ಉದ್ಯಮಿ ವಿಜಯ್ ಮಲ್ಯಗೆ ಬ್ಯಾಂಕುಗಳು ನೀಡಿರುವ ಸಾಲಗಳ ಬಗ್ಗೆ ದಾಖಲೆಗಳಿಲ್ಲ ! ವಿತ್ತ ಸಚಿವಾಲಯ ಹೇಳಿದ್ದೇನು..?

Pinterest LinkedIn Tumblr

ನವದೆಹಲಿ: ಉದ್ಯಮಿ ವಿಜಯ್ ಮಲ್ಯಗೆ ಬ್ಯಾಂಕುಗಳು ನೀಡಿರುವ ಸಾಲಗಳ ಬಗ್ಗೆ ತನ್ನ ಬಳಿ ಮಾಹಿತಿಗಳಿಲ್ಲ ಎಂದು ಹಣಕಾಸು ಸಚಿವಾಲಯ ಕೇಂದ್ರ ಮಾಹಿತಿ ಆಯೋಗಕ್ಕೆ ತಿಳಿಸಿದೆ. ಇದರಿಂದ ಹಣಕಾಸು ಸಚಿವಾಲಯದ ಈ ಪ್ರತಿಕ್ರಿಯೆ ಅಸ್ಪಷ್ಟವಾಗಿದ್ದು, ಕಾನೂನು ಪ್ರಕಾರ ಸಮರ್ಥನೀಯವಲ್ಲ ಎಂದು ಮಾಹಿತಿ ಆಯೋಗ ತೀರ್ಮಾನಕ್ಕೆ ಬರುವಂತೆ ಮಾಡಿದೆ.

ವಿಜಯ್ ಮಲ್ಯ ಅವರು ಬ್ಯಾಂಕುಗಳಿಂದ ಪಡೆದುಕೊಂಡಿದ್ದ ಸಾಲಗಳ ಬಗ್ಗೆ ರಾಜೀವ್ ಕುಮಾರ್ ಎಂಬುವವರು ಮಾಹಿತಿ ಹಕ್ಕು ಕಾಯ್ದೆಯಡಿ ಹಣಕಾಸು ಸಚಿವಾಲಯದಿಂದ ವಿವರ ಕೇಳಿದ್ದರು. ಆದರೆ ಹಣಕಾಸು ಆಯೋಗ ಸೂಕ್ತ ಮಾಹಿತಿ ನೀಡದಿದ್ದ ಕಾರಣ ಅರ್ಜಿಯನ್ನು ಸೂಕ್ತ ಸಾರ್ವಜನಿಕ ಪ್ರಾಧಿಕಾರಕ್ಕೆ ವರ್ಗಾಯಿಸುವ ಅಗತ್ಯವಿದೆ ಎಂದು ಕೇಂದ್ರ ಮಾಹಿತಿ ಆಯೋಗದ ಮುಖ್ಯ ಮಾಹಿತಿ ಆಯುಕ್ತ ಆರ್.ಕೆ.ಮಾಥೂರ್ ತಿಳಿಸಿದ್ದಾರೆ.

ವಿವಿಧ ಬ್ಯಾಂಕುಗಳು ವಿಜಯ್ ಮಲ್ಯ ಅವರಿಗೆ ಮಂಜೂರು ಮಾಡಿದ್ದ ಸಾಲಗಳ ಬಗ್ಗೆ ಹಣಕಾಸು ಸಚಿವಾಲಯದ ಬಳಿ ಮಾಹಿತಿ ಇಲ್ಲದಿರಬಹುದು ಅಥವಾ ಸಾಲಗಳನ್ನು ನೀಡುವಾಗ ವಿಜಯ್ ಮಲ್ಯ ನೀಡಿದ ಭದ್ರತೆಯ ವಿವರಗಳು ಇಲ್ಲದಿರಬಹುದು. ಆದರೆ ಈ ವಿಷಯದಲ್ಲಿ ಸಂಸತ್ತಿನಲ್ಲಿ ಈ ಹಿಂದೆ ಹಣಕಾಸು ಸಚಿವಾಲಯ ಈ ಸಂಬಂಧ ಪ್ರಶ್ನೆಗೆ ಉತ್ತರ ನೀಡಿತ್ತು ಎಂದು ಮಾಥೂರ್ ಹೇಳಿದ್ದಾರೆ.

ಕಳೆದ ವರ್ಷ ಮಾರ್ಚ್ 17ರಂದು ವಿಜಯ್ ಮಲ್ಯ ಅವರಿಗೆ ನೀಡಲಾದ ಸಾಲಗಳ ಬಗ್ಗೆ ಸಂಸತ್ತಿನಲ್ಲಿ ಮಾಹಿತಿ ನೀಡಿದ್ದ ಕೇಂದ್ರ ಹಣಕಾಸು ಇಲಾಖೆ ರಾಜ್ಯ ಸಚಿವ ಸಂತೋಷ್ ಗಂಗ್ ವಾರ್, ಮಲ್ಯ ಎಂಬಗೆ 2004ರ ಸೆಪ್ಟೆಂಬರ್ ತಿಂಗಳಲ್ಲಿ ಸಾಲ ನೀಡಲಾಗಿತ್ತು ಮತ್ತು 2008ರಲ್ಲಿ ಅದನ್ನು ಪರಿಶೀಲಿಸಲಾಗಿತ್ತು, ವಿಜಯ್ ಮಲ್ಯ ಬಳಿ 2009ರಲ್ಲಿ 8,040 ಕೋಟಿ ರೂಪಾಯಿ ಸಾಲ ಅನುತ್ಪಾದಕ ಆಸ್ತಿಗಳೆಂದು ಘೋಷಿಸಲಾಗಿತ್ತು ಮತ್ತು 2010ರಲ್ಲಿ ಅದನ್ನು ಪುನರ್ರಚಿಸಲಾಯಿತು ಎಂದು ಮಾಹಿತಿ ನೀಡಿದ್ದರು ಎಂದು ಮಾಥೂರ್ ಹೇಳಿದ್ದಾರೆ.

Comments are closed.