ಬಿಜಾಪುರ್(ಛತ್ತೀಸ್ ಗಢ): ಛತ್ತೀಸ್ ಗಢದ ಬಿಜಾಪುರ ಜಿಲ್ಲೆಯಲ್ಲಿ ರಸ್ತೆ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದ 10 ವಾಹನಗಳನ್ನು ನಕ್ಸಲೀಯರು ಸ್ಫೋಟಿಸಿದ್ದಾರೆ.
ಬಿಜಾಪುರ್ ಜಿಲ್ಲೆಯ ಮಡ್ಡೆನ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಅಲ್ಟ್ರಾ ಬಂಡುಕೋರರ ಸ್ಫೋಟದಲ್ಲಿ ಏಳು ಟ್ರಾಕ್ಟರ್ ಗಳು, ಒಂದು ಡೊಜರ್, ಒಂದು ನೀರಿನ ಟ್ಯಾಂಕರ್ ಮತ್ತು ಜೆಸಿಬಿ ವಾಹನ ನಾಶಗೊಂಡಿವೆ.
ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ರಸ್ತೆ ನಿರ್ಮಾಣ ಕಾರ್ಯ ನಡೆಯುತ್ತಿತ್ತು.
ಕಳೆದ ತಿಂಗಳು ನಕ್ಸಲೀಯರು ಛತ್ತೀಸ್ ಗಢದ ಬಲ್ರಾಂಪುರ ಜಿಲ್ಲೆಯ ಜಾರ್ಖಂಡ್-ಛತ್ತೀಸ್ ಗಢ ಗಡಿಭಾಗದಲ್ಲಿ 6 ವಾಹನಗಳನ್ನು ಸ್ಫೋಟಿಸಿದ್ದರು.