
ನವದೆಹಲಿ: ಬಿ ಎಸ್ ಎಫ್ ನ ಮಹಿಳಾ ಕಮಾಂಡೋಗಳ ಮೋಟಾರ್ ಬೈಕ್ ಮೇಲಿನ ಸಾಹಸ ಪ್ರದರ್ಶನ, ನೌಕ ದಳದ ಏರ್ ಕ್ಯಾರಿಯರ್ ವಿಕ್ರಾಂತ ಮತ್ತು ಹ್ಯಾಲಿಕ್ಯಾಪ್ಟರ್ ಕ್ಯಾರಿಯರ್ ರುದ್ರಾ ಸೇರಿದಂತೆ ಹಲವಾರು ವಿಶೇಷಗಳು ಈ ಬಾರಿಯ ಪಥ ಸಂಚಲನದಲ್ಲಿದ್ದವು. ಹಾಗಾದರೆ ಅವು ಏನು? ಇಲ್ಲಿದೆ ನೋಡಿ ಆ ಪಟ್ಟಿ.
ಇದೇ ಮೊದಲ ಬಾರಿಗೆ ಗಣರಾಜ್ಯೋತ್ಸವದ ಪರೇಡ್ನಲ್ಲಿ ಆಸಿಯಾನ್ ರಾಷ್ಟ್ರಗಳ ಪ್ರತಿನಿಧಿಗಳು ಭಾಗಿ
ಥೈಲ್ಯಾಂಡ್, ವಿಯೆಟ್ನಾಂ, ಇಂಡೋನೇಷ್ಯಾ, ಮಲೇಷ್ಯಾ, ಫಿಲಿಪ್ಪೀನ್ಸ್,
ಸಿಂಗಪುರ್, ಮ್ಯಾನ್ಮಾರ್, ಕಾಂಬೋಡಿಯಾ, ಲಾವೋಸ್, ಬ್ರೂನೆ ದೇಶಗಳ ಪ್ರತಿನಿಧಿಗಳು ಭಾಗಿ
ಎಂ-17 ವಿ5 ಹೆಲಿಕಾಪ್ಟರ್ ಮೂಲಕ ಆಗಸದಲ್ಲಿ ಆಸಿಯಾನ್ ರಾಷ್ಟ್ರಗಳಿಗೆ ಧ್ವಜವಂದನೆ
ಇದೇ ಮೊದಲ ಬಾರಿಗೆ ಬಿಎಸ್ಎಫ್ ಮಹಿಳಾ ಪಡೆಯಿಂದ ಸಾಹಸ ಪ್ರದರ್ಶನ
ಸೀಮಾ ಭವಾನಿ ತಂಡದ 113 ಮಹಿಳಾ ಯೋಧರಿಂದ ಬೈಕ್ ಸಾಹಸ
ಬಿಎಸ್ಎಫ್ ಯೋಧರಿಂದ ಒಂಟೆ ಮತ್ತು 51 ಕುದುರೆಗಳ ಪಥಸಂಚಲನ
ರಾಜ್ಪಥದಲ್ಲಿ ವಿವಿಧ ರಾಜ್ಯಗಳ 23 ಸ್ತಬ್ಧ ಚಿತ್ರಗಳ ಪ್ರದರ್ಶನ
ಮನ್ಕೀ ಬಾತ್, ಕರ್ನಾಟಕದ ವನ್ಯಜೀವಿ, ಐಟಿಬಿಪಿ ಸೇರಿ 23 ಟ್ಯಾಬ್ಲೋ ಪ್ರದರ್ಶನ
ನೋಟು ನಿಷೇಧದ ಬಳಿಕ ಕಪ್ಪು ಹಣದ ವಿರುದ್ಧ ಸಮರದ ಕುರಿತು ಮಾಹಿತಿ
ನೌಕಾದಳದ ಏರ್ ಕ್ಯಾರಿಯರ್ ವಿಕ್ರಾಂತ್
ಪಥಸಂಚಲನದಲ್ಲಿ ಹೆಲಿಕಾಪ್ಟರ್ ಕ್ಯಾರಿಯರ್ ರುದ್ರ ಹೆಲಿಕಾಪ್ಟರ್ ಪ್ರದರ್ಶನ
38 ವಿವಿಧ ಯುದ್ಧ ಹೆಲಿಕಾಫ್ಟರ್ಗಳಿಂದ ವೈಮಾನಿಕ ಪ್ರದರ್ಶನ
ಕಾಂಬೋಡಿಯಾ, ಮಲೇಷ್ಯಾ, ಥಾಯ್ಲೆಂಡ್ ದೇಶಗಳ ಜಾನಪದ ಶೈಲಿಯ ನೃತ್ಯ ಪ್ರದರ್ಶನ
‘ನಿರ್ಭಯ್’ ಕ್ಷಿಪಣಿ ಹಾಗೂ ‘ಅಶ್ವಿನಿ’ ರಾಡಾರ್ ಪ್ರದರ್ಶನ
ಏರ್ ಬೋರ್ನ್ ವಾರ್ನಿಂಗ್ ಕಂಟ್ರೋಲರ್ ‘ನೇತ್ರ’ ವಿಮಾನದ ಪ್ರದರ್ಶನ
Comments are closed.