
ಚೆನ್ನೈ: ವಿಚಿತ್ರ ತೀರ್ಪುಗಳನ್ನು ನೀಡುವುದರಲ್ಲಿ ಮದ್ರಾಸ್ ಹೈಕೋರ್ಟ್ ಮುಂದಿದ್ದು ಅಂತೆ ಇದೀಗ ಸಂತಾನೋತ್ಪತ್ತಿ ಉದ್ದೇಶಕ್ಕಾಗಿ ಕೈದಿಯೊಬ್ಬನಿಗೆ ಪರೋಲ್ ನೀಡಿ ಸುದ್ದಿಯಾಗಿದೆ.
ತಿರುನ್ವೆಲಿ ಜಿಲ್ಲೆಯಲ್ಲಿನ ಕೇಂದ್ರ ಕಾರಾಗೃಹದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ 40 ವರ್ಷದ ಕೈದಿಗೆ ಸಂತಾನೋತ್ಪತ್ತಿ ಉದ್ದೇಶಕ್ಕಾಗಿ ಎರಡು ವಾರಗಳ ಪರೋಲ್ ಅನ್ನು ಹೈಕೋರ್ಟ್ ನೀಡಿದೆ.
ಮದ್ರಾಸ್ ಹೈಕೋರ್ಟ್ ವಿಭಾಗೀಯ ಪೀಠದ ನ್ಯಾಯಾಧೀಶರಾದ ಎಸ್ ವಿಮಲಾ ದೇವಿ ಮತ್ತು ಟಿ ಕೃಷ್ಣ ವಲ್ಲಿ ಅವರು ಕೈದಿ ಸಿದ್ಧಿಕ್ ಅಲಿಗೆ ಎರಡು ವಾರಗಳ ತಾತ್ಕಾಲಿಕ ರಜೆ ನೀಡಿದೆ. 32 ವರ್ಷದ ಅಲಿ ಪತ್ನಿ ಪಾಲಯಂಕೋಟೈ ಕೇಂದ್ರ ಕಾರಾಗೃಹದಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು.
ಇದೇ ವೇಳೆ ಹಲವು ದೇಶಗಳು ಅಂತಹ ಹಕ್ಕುಗಳನ್ನು ಕೈದಿಗಳಿಗೆ ನೀಡಿವೆ. ಇಂತಹ ಪ್ರಕರಣಗಳನ್ನು ಪರಿಗಣಿಸಲು ಸರ್ಕಾರ ಸಮಿತಿಯನ್ನು ರೂಪಿಸಬೇಕು. ಕೈದಿಗಳ ಸಂಭಾವ್ಯ ಭೇಟಿಗಳನ್ನು ಅನುಮತಿಸುವ ಅರ್ಹತೆಗಳನ್ನು ಮತ್ತು ಅವಲೋಕನಗಳನ್ನು ವಿಶ್ಲೇಷಿಸುವ ಸಾಧ್ಯತೆಗಳನ್ನು ಪರಿಗಣಿಸಲು ಸರ್ಕಾರ ಸಮಿತಿಯೊಂದನ್ನು ರೂಪಿಸುವುದಕ್ಕೆ ಇದು ಸೂಕ್ತ ಸಮಯ ಎಂದು ಪೀಠ ಅಭಿಪ್ರಾಯಪಟ್ಟಿದೆ.
Comments are closed.