ರಾಷ್ಟ್ರೀಯ

20 ಲಕ್ಷ ಮೀರಿ ಜಮೆ ಮಾಡಿದ್ದ 2 ಲಕ್ಷ ಮಂದಿಗೆ ಐಟಿ ನೊಟೀಸ್‌

Pinterest LinkedIn Tumblr


ಹೊಸದಿಲ್ಲಿ : ಸರಕಾರ ಕಳೆದ ವರ್ಷ ನೋಟು ಅಮಾನ್ಯ ಮಾಡಿದ ಬಳಿಕ ಬ್ಯಾಂಕ್‌ ಖಾತೆಗೆ 500 ರೂ. ಮತ್ತು 1,000 ರೂ. ರದ್ದಾದ ನೋಟುಗಳನ್ನು 20 ಲಕ್ಷ ರೂ.ಗಳಿಗೂ ಮೀರಿದ ಪ್ರಮಾಣದಲ್ಲಿ ಜಮೆ ಮಾಡಿದ ಸುಮಾರು ಎರಡು ಲಕ್ಷ ಮಂದಿಗೆ ಆದಾಯ ತೆರಿಗೆ ಇಲಾಖೆ ಈ ಬಗ್ಗೆ ರಿಟರ್ನ್ ಸಲ್ಲಿಸುವಂತೆ ನೊಟೀಸ್‌ ಜಾರಿ ಮಾಡಿದೆ.

ಈ ಎರಡು ಲಕ್ಷ ಮಂದಿಗೆ ಬಹಳ ಹಿಂದೆಯೇ ಆದಾಯ ತೆರಿಗೆ ಇಲಾಖೆ ಬೃಹತ್‌ ಮೊತ್ತದ ಜಮೆ ಬಗ್ಗೆ ಸ್ಪಷ್ಟೀಕರಣ ನೀಡುವಂತೆ ಸೂಚಿಸಿ ಸಾಕಷ್ಟು ಕಾಲಾವಕಾಶ ನೀಡಿತ್ತು. ಆದರೆ ಅವರಲ್ಲಿ ಯಾರಿಂದಲೂ ಈ ತನಕವೂ ಉತ್ತರ ಬಂದಿಲ್ಲ.

ಹಾಗಾಗಿ ಈಗ ಮತ್ತೆ ಅವರಿಗೆ ರಿಟರ್ನ್ ಸಲ್ಲಿಸುವಂತೆ ಸೂಚಿಸಿ ನೊಟೀಸ್‌ ಜಾರಿ ಮಾಡಲಾಗಿದೆ ಎಂದು ಐಟಿ ಇಲಾಖಾಧಿಕಾರಿ ತಿಳಿಸಿದ್ದಾರೆ.

-ಉದಯವಾಣಿ

Comments are closed.