
ನಾಂದೇಡ್: ಕರ್ನಾಟಕದಲ್ಲಿ ‘ಹುಟ್ಟಿದರೇ ಕನ್ನಡ ನಾಡಲ್ಲಿ ಹುಟ್ಟಬೇಕು’ ಎಂದು ಹಾಡು ಹಾಡಿದ್ದ ಮಹಾರಾಷ್ಟ್ರದ ಕಂದಾಯ ಹಾಗೂ ಕೊಲ್ಲಾಪುರ ಜಿಲ್ಲಾ ಉಸ್ತುವಾರಿ ಮತ್ತು ಗಡಿ ಉಸ್ತುವಾರಿ ಸಚಿವ ಚಂದ್ರಕಾಂತ ಪಾಟೀಲ್ ಅವರು ರಾಜೀನಾಮೆ ನೀಡಬೇಕೆಂದು ಎನ್ಸಿಪಿ ನಾಯಕ ಅಜಿತ್ ಪವಾರ್ ಒತ್ತಾಯಿಸಿದ್ದಾರೆ.
‘ನಮ್ಮ ಸಚಿವರ ಕರ್ನಾಟಕ ಭೇಟಿಗೆ ಯಾವುದೇ ಅಭ್ಯಂತರವಿಲ್ಲ. ಆದರೆ, ಅವರು ಮಹಾರಾಷ್ಟ್ರ ರಾಜ್ಯದ ಪ್ರತಿನಿಧಿಯಂತೆ ವರ್ತಿಸಬೇಕು’ ಎಂದು ಪವಾರ್ ಟ್ವೀಟ್ ಮಾಡಿದ್ದಾರೆ.
ಗೋಕಾಕ ತಾಲೂಕಿನ ತವಗ ಗ್ರಾಮದಲ್ಲಿನ ದುರ್ಗಾದೇವಿ ದೇವಸ್ಥಾನದ ಉದ್ಘಾಟನೆಗೆ ಆಗಮಿಸಿದ್ದ ಸಚಿವ ಚಂದ್ರಕಾಂತ ಪಾಟೀಲ, ಕನ್ನಡದಲ್ಲೇ ಉದ್ಘಾಟನೆ ಭಾಷಣ ಮಾಡಿ, ”ಎರಡೂ ರಾಜ್ಯಗಳ ನಡುವಿನ ಸಾಮರಸ್ಯದ ಸಂಬಂಧ ಹೀಗೇ ಮುಂದುವರಿಯಬೇಕು”, ಎಂದು ಆಶಿಸಿದರು. ಅಲ್ಲದೆ, ”ನಾವು ಎಲ್ಲ ಭಾಷೆಗಳನ್ನೂ ಗೌರವಿಸಿ ಪ್ರೀತಿಸಬೇಕು” ಎಂಬ ಕಿವಿಮಾತು ಹೇಳಿದರು. ನಂತರ ಕನ್ನಡದ ‘ಆಕಸ್ಮಿಕ’ ಚಲನಚಿತ್ರದ ಜನಪ್ರಿಯ ‘ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು’ ಹಾಡನ್ನು ಹಾಡಿದಾಗ ನೆರೆದಿದ್ದ ಜನರು ಹುಚ್ಚೆದ್ದು ಕುಣಿದರು. ಸಚಿವ ಚಂದ್ರಕಾಂತ ಪಾಟೀಲ ಅವರಿಗೆ ಜಯ ಘೋಷ ಹಾಕಿದರು.
ಸಹಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ ಅವರ ಆಹ್ವಾನದ ಮೇರೆಗೆ ದೇವಸ್ಥಾನದ ಉದ್ಘಾಟನೆಗಾಗಿ ಸಚಿವ ಚಂದ್ರಕಾಂತ ಪಾಟೀಲ ಆಗಮಿಸಿದ್ದರು.
Comments are closed.