ರಾಷ್ಟ್ರೀಯ

ಕಲಾಮ್​ ಅಂತರಿಕ್ಷ ವಿಜ್ಞಾನಿ, ಮೋದಿ ಸಾಮಾಜಿಕ ವಿಜ್ಞಾನಿ: ರಾಷ್ಟ್ರಪತಿ ಕೋವಿಂದ್​

Pinterest LinkedIn Tumblr


ಅಹಮದಾಬಾದ್​: ರಾಷ್ಟ್ರಪತಿ ರಾಮನಾಥ್​ ಕೋವಿಂದ್​ ಎಪಿಜೆ ಅಬ್ದುಲ್​ ಕಲಾಮ್​ ಹಾಗೂ ನರೇಂದ್ರ ಮೋದಿ ಅವರ ಮಧ್ಯ ಹೋಲಿಕೆಯೊಂದನ್ನು ಮಾಡಿದ್ದಾರೆ. ಮಾಜಿ ರಾಷ್ಟ್ರಪತಿ ಕಲಾಮ್​ ಅಂತರಿಕ್ಷ ವಿಜ್ಞಾನಿಯಾದರೇ, ಪ್ರಧಾನಿ ಮೋದಿ ಸಾಮಾಜಿಕ ವಿಜ್ಞಾನಿ ಎಂದರು.

ನಗರದಲ್ಲಿ ನಡೆದ ಗುಜರಾತ್​ ವಿಶ್ವ ವಿದ್ಯಾಲಯದ 66ನೇ ಘಟಿಕೋತ್ಸವದಲ್ಲಿ ಮಾತನಾಡಿದ ಅವರು, ಕಲಾಮ್​​ ಸರ್​ ರಾಷ್ಟ್ರಪತಿಗಳಾಗಿದ್ದರೂ ಸಹ ಅವರನ್ನು ನಾನು ಮೂಲತಃ ಒಬ್ಬ ಅಂತರಿಕ್ಷ ವಿಜ್ಞಾನಿಯಂದೇ ಹೇಳುತ್ತೇನೆ. ಆದರೆ, ಮೋದಿ ಒಬ್ಬ ಸಾಮಾಜಿಕ ವಿಜ್ಞಾನಿ ಎಂದರು.

ಮೋದಿ ಯವರು ಸಹ ಇಲ್ಲಿಯೇ ಹುಟ್ಟಿ, ಬೆಳೆದವರು ಹಾಗೂ ಕಲಿತವರು. ಚಹ ಮಾರುವ ಯುವಕನೊಬ್ಬ ಪ್ರಧಾನಿಯಾಗಿರುವುದು ಅತ್ಯಂತ ಸ್ಪೂರ್ತಿದಾಯಕವಾದ ಸಂಗತಿ ಎಂದರು. ಸ್ಟಾರ್ಟ್​ಅಪ್​ ಇಂಡಿಯಾ, ಡಿಜಿಟಲ್​​ ಇಂಡಿಯಾದಂತಹ ಯೋಜನೆಗಳನ್ನು ಆರಂಭಿಸುವ ಮೂಲಕ ಇಂದಿನ ಪಿಳಿಗೆಯವರಿಗೆ 21ನೇ ಶತಮಾನದ ಬಾಗಿಲನ್ನು ತೆರೆದಿದ್ದಾರೆ ಎಂದರು.

Comments are closed.