ರಾಷ್ಟ್ರೀಯ

ಗಂಡನ ಹೆಸರು ಹಿಡಿದು ಕರೆಯುವುದು ಸರಿಯೇ..?

Pinterest LinkedIn Tumblr

ಗಂಡನ ಹೆಸರು ಕರೆಯಬಾರದು ಅಂತಲೇ ಬೇರೆ ಬೇರೆಯ ಹೆಸರಿಟ್ಟು ಕರೆಯುತ್ತಿದ್ದ ಮಹಿಳೆಯರು ಇದೀಗ ಮುಂಚಿನಷ್ಟು ಸಂಪ್ರದಾಯಕ್ಕೆ ಅಂಟಿಕೊಂಡಿಲ್ಲ.

ಅವರ ಅಡ್ಡ ಹೆಸರನ್ನು ಕರೆಯುವಂಥದ್ದು ಕೂಡ ಕಮ್ಮಿ ಆಗಿದ್ದು, ಅವರ ಹೆಸರನ್ನೇ ನೇರವಾಗಿ ಕರೆಯುವ ಟ್ರೆಂಡ್‌ ಹೆಚ್ಚುತ್ತಿದೆ ಎಂದಿದೆ ಇತ್ತೀಚಿನ ಸಮೀಕ್ಷೆ.’
ಪತ್ನಿ ತನ್ನ ಹೆಸರನ್ನು ಹಿಡಿದು ಕರೆಯುವುದು ಪತಿಗೆ ಇಷ್ಟವಾಗುತ್ತದೆಯೋ ಇಲ್ಲವಾ ಆದರೆ ಅಡ್ಡ ಹೆಸರು ಅಥವಾ ಇನ್ಯಾವುದೇ ಹೆಸರಿಟ್ಟು ಕರೆಯುವುದಕ್ಕಿಂತ ಪತಿಯ ಹೆಸರನ್ನೇ ಕರೆಯುವುದರಲ್ಲಿ ಏನೋ ಒಂಥರಾ ಖುಷಿ ಸಿಗುತ್ತದೆಯಂತೆ ಹೆಣ್ಣುಮಕ್ಕಳಿಗೆ.

ಹಾಗೆ ಹೆಸರು ಹೇಳಿ ಕರೆಯುವುದರಲ್ಲಿ ಪರಸ್ಪರ ದಾಂಪತ್ಯದ ಪವರ್‌ ಕೂಡ ಇಲ್ಲಿ ಕಾಣಿಸುತ್ತದೆ ಎಂದು ನಂಬಲಾಗಿದೆ. ಆದರೆ ಈ ಸಂಬಂಧ ಹಲವು ಭಿನ್ನಾಭಿಪ್ರಾಯಗಳಿದ್ದು, ಅವರವರ ಸಂಪ್ರದಾಯ, ಹೊಂದಾಣಿಕೆ ಮೇಲೆ ಸಂಬೋಧಿಸುವ ವಿಧಾನವೂ ಅವಲಂಬಿತ.

Comments are closed.