
ಜಮ್ಮು: 2016ಕ್ಕೆ ಹೋಲಿಸಿದರೆ ಜಮ್ಮು ಕಾಶ್ಮೀರವು ಕಳೆದ ವರ್ಷ ಮಹಿಳೆಯರು ಮತ್ತು ಹುಡುಗಿಯರ ಅತ್ಯಧಿಕ ಅಪಹರಣ ಪ್ರಕರಣವನ್ನು ಕಂಡಿದೆ.
ಕಳೆದ ವರ್ಷ ಹುಡುಗಿಯರು ಹಾಗೂ ಮಹಿಳೆಯರು 877 ಅಪಹರಣ ಪ್ರಕರಣಗಳು ದಾಖಲಾಗಿವೆ. 2016ರಲ್ಲಿ 775 ಪ್ರಕರಣಗಳು ದಾಖಲಾಗಿದ್ದವು ಎಂದು ಜಮ್ಮು ಕಾಶ್ಮೀರದ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಅವರು ಇಂದು ಮಂಗಳವಾರ ವಿಧಾನ ಸಭೆಯಲ್ಲಿ ಪಿಡಿಪಿಯ ಅಂಜುಮ್ ಫಜೀಲಿ ಅವರ ಪ್ರಶ್ನೆಗೆ ಲಿಖೀತ ಉತ್ತರ ನೀಡಿದರು.
2017ರಲ್ಲಿ ಅಪಹರಣ ಕೇಸುಗಳಿಗೆ ಸಂಬಂಧಿಸಿ 534 ಆರೋಪಿಗಳನ್ನು ಸೆರೆಹಿಡಿಯಲಾಗಿದೆ; 2016ರಲ್ಲಿ ಸೆರೆ ಹಿಡಿಯಲ್ಪಟ್ಟವರ ಸಂಖ್ಯೆ 479 ಎಂದವರು ತಿಳಿಸಿದರು.
-ಉದಯವಾಣಿ
Comments are closed.