ರಾಷ್ಟ್ರೀಯ

ಭಾರತೀಯ ಸೇನೆ ನಡೆಸಿದ ಪ್ರತೀಕಾರದ ದಾಳಿ: 7 ಪಾಕಿಸ್ತಾನಿ ಸೈನಿಕರ ಹೊಡೆದುರುಳಿಸಿದ ಯೋಧರು

Pinterest LinkedIn Tumblr

ಪೂಂಚ್(ಜಮ್ಮು ಮತ್ತು ಕಾಶ್ಮೀರ): ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದ ಗಡಿಯಲ್ಲಿ ಭಯೋತ್ಪಾದಕರನ್ನು ಹೊಡೆದುರುಳಿಸಿದ ಬೆನ್ನಲ್ಲೇ ಪಾಕಿಸ್ತಾನ ಸೈನಿಕರು ಕದನ ವಿರಾಮ ಉಲ್ಲಂಘಿಸಿ ಗುಂಡಿನ ದಾಳಿ ನಡೆಸಿದ್ದು ಇದಕ್ಕೆ ಭಾರತೀಯ ಸೇನೆ ನಡೆಸಿದ ಪ್ರತೀಕಾರದ ದಾಳಿಯಲ್ಲಿ 7 ಪಾಕ್ ಸೈನಿಕರು ಹತ್ಯೆಯಾಗಿದ್ದಾರೆ.

ಅಂತಾರಾಷ್ಟ್ರೀಯ ಗಡಿ ರೇಖೆ ಪೂಂಚ್ ಜಿಲ್ಲೆಯ ಮೇಧಾರ್ ಸೆಕ್ಟರ್ ನ ಕೋಟ್ಲಿ ಪ್ರದೇಶದಲ್ಲಿ ಪಾಕಿಸ್ತಾನ ಸೈನಿಕರು ಗುಂಡಿನ ದಾಳಿ ನಡೆಸಿದ್ದರು. ಇದಕ್ಕೆ ಪ್ರತಿಯಾಗಿ ಭಾರತೀಯ ಸೇನೆ ಸಹ ಗುಂಡಿನ ದಾಳಿ ನಡೆಸಿದ್ದು ಇದರಲ್ಲಿ ಪಾಕಿಸ್ತಾನದ ನಾಲ್ಕು ಸೇನಾ ಪೋಸ್ಟ್ ಗಳು ಧ್ವಂಸವಾಗಿವೆ. ಇನ್ನು ಏಳು ಸೈನಿಕರು ಹತ್ಯೆಯಾಗಿದ್ದು ನಾಲ್ವರು ಗಾಯಗೊಂಡಿದ್ದಾರೆ.

ಇಂದು 70ನೇ ಸೇನಾ ದಿನ ಸಂಭ್ರಮಾಚರಣೆಯಲ್ಲಿ ಭಾರತೀಯರು ತೊಡಗಿದ್ದು ಶತ್ರು ರಾಷ್ಟ್ರದ ಸೈನಿಕರ ಹತ್ಯೆಗೈದು ಭಾರತೀಯ ಯೋಧರು ದೊಡ್ಡ ಉಡುಗೊರೆಯನ್ನು ಕೊಟ್ಟಿದ್ದಾರೆ.

ಕಾಶ್ಮೀರದ ಉರಿ ಸೆಕ್ಟರ್ ನಲ್ಲಿ ಬೆಳಗ್ಗೆ ಅಕ್ರಮವಾಗಿ ಗಡಿಯೊಳಗೆ ನುಸುಳಲು ಯತ್ನಿಸಿದ ಪಾಕಿಸ್ತಾನ ಮೂಲದ ಜೈಶ್ ಇ ಮೊಹಮದ್ ಉಗ್ರ ಸಂಘಟನೆಗೆ ಸೇರಿದೆ ಐದು ಮಂದಿ ಆತ್ಮಾಹುತಿ ದಾಳಿಕೋರ ಉಗ್ರರನ್ನು ಭಾರತೀಯ ಸೇನೆಯ ಯೋಧರು ಹೊಡೆದುರುಳಿಸಿದ್ದರು.

Comments are closed.