ರಾಷ್ಟ್ರೀಯ

3.21 ಕೋಟಿ ರೂ.ಮೌಲ್ಯದ ವಿದೇಶಿ ಕರೆನ್ಸಿ ಸಾಗಾಟ; ಜೆಟ್ ಏರ್ ವೇಸ್ ನ ಗಗನ ಪರಿಚಾರಿಕೆ ಸೆರೆ

Pinterest LinkedIn Tumblr

ಹೊಸದಿಲ್ಲಿ: ಹಾಂಕಾಂಗ್ ಗೆ  3.21 ಕೋಟಿ ರೂ.ಮೌಲ್ಯದ 4,80,200 ಯುಎಸ್ ಡಾಲರ್ ನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಜೆಟ್ ಏರ್ ವೇಸ್ ನ ಗಗನ ಪರಿಚಾರಿಕೆ ಒಬ್ಬರನ್ನು ಕಂದಾಯ ಗುಪ್ತಚರ ನಿರ್ದೇಶನಾಲಯದ (ಡಿ.ಆರ್.ಐ.) ಅಧಿಕಾರಿಗಳು  ಬಂಧಿಸಿದ್ದಾರೆ.

ಗಗನ ಪರಿಚಾರಿಕೆ ಮತ್ತು ಪೂರೈಕೆದಾರ ವ್ಯಕ್ತಿ ಅಮಿತ್‌ ಎಂಬಾತನನ್ನು ಅಧಿಕಾರಿಗಳು ಬಂಧಿಸಿ ಮುಂದಿನ ತನಿಖೆ ನಡೆಸುತ್ತಿದ್ದಾರೆ. 2018ರ ಜನವರಿ 7 – 8 ರ ನಡುವಿನ ರಾತ್ರಿ ಅಧಿಕಾರಿಗಳು ಜೆಟ್‌ ಏರ್‌ ವೇಸ್‌ನ ಈ ವ್ಯಕ್ತಿಯನ್ನು ಬಂಧಿಸಿರುವುದಾಗಿ ವರದಿಯಾಗಿದೆ.

ಜೆಟ್‌ ಏರ್‌ ವೇಸ್‌ ಬಿಡುಗಡೆ ಮಾಡಿರುವ ಪ್ರಕಟನೆ, “ಡಿಆರ್‌ಐ ತಂಡದವರು ನಡೆಸಿದ ತಪಾಸಣೆಯಲ್ಲಿ ಭಾರೀ ಪ್ರಮಾಣದ ವಿದೇಶಿ ಕರೆನ್ಸಿಯನ್ನು ಏರ್‌ ಲೈನ್ಸ್‌ ಸಿಬಂದಿಯಿಂದ ವಶಪಡಿಸಿಕೊಂಡಿದ್ದಾರೆ’ ಎಂದು ಹೇಳಿದೆ.

ಕಾನೂನು ಅನುಷ್ಠಾನ ಸಂಸ್ಥೆಯ ತನಿಖೆಯನ್ನು ಹಾಗೂ ಅದು ನೀಡುವ ಮಾಹಿತಿಗಳನ್ನು ಆಧರಿಸಿ ಜೆಟ್‌ ಏರ್‌ ವೇಸ್‌ ಮುಂದಿನ ಕ್ರಮ ತೆಗೆದುಕೊಳ್ಳಲಿದೆ ಎಂದು ಪ್ರಕಟನೆ ತಿಳಿಸಿದೆ.

ಬಂಧಿತ ಮಹಿಳಾ ಸಿಬಂದಿಯು ಕಪ್ಪು ಹಣವನ್ನು ವಿನಿಮಯಿಸಿ ದೇಶದೊಳಗೆ ಚಿನ್ನವನ್ನು ತರುವ ವಿಸ್ತೃತ ಯೋಜನೆಯ ಭಾಗವಾಗಿದ್ದಳು ಎಂದು ವರದಿಗಳು ತಿಳಿಸಿವೆ.

ಝೀ ನ್ಯೂಸ್‌ಗೆ ಮೂಲಗಳು ತಿಳಿಸಿರುವ ಪ್ರಕಾರ ಗಗನ ಪರಿಚಾರಿಕೆಯೊಂದಿಗೆ ಅಮಿತ್‌ ಎಂಬಾತನು ಗೆಳೆತನ ಮಾಡಿಕೊಂಡಿದ್ದ ಮತ್ತು ಅಪಾರ ಪ್ರಮಾಣದ ನಗದನ್ನು ಸಾಗಿಸುವ ತನ್ನ ಯೋಜನೆಯನ್ನು ಆಕೆಗೆ ಮನವರಿಕೆ ಮಾಡಿದ್ದ. ಕಳ್ಳಸಾಗಣೆ ಮಾಡಲ್ಪಡುವ ಒಟ್ಟು ಹಣದ ಶೇ.1 ಆಕೆಗೆ ಸಿಗುವುದಿತ್ತು. ಅಂತೆಯೇ ಕಳೆದ ಎರಡು ತಿಂಗಳ ಅವಧಿಯಲ್ಲಿ ಹಾಂಕಾಂಗ್‌ ಗೆ ನಡೆಸಲಾದ 7 ಟ್ರಿಪ್‌ ಗಳಲ್ಲಿ ಒಟ್ಟು 10 ಲಕ್ಷ ಡಾಲರ್‌ ನಗದನ್ನು ಕಳ್ಳ ಸಾಗಣೆ ಮಾಡಲಾಗಿತ್ತು.

ಮಹಿಳಾ ಚಾಲಕ ಸಿಬಂದಿಯು ನಗದನ್ನು foil ಕಾಗದದೊಳಗೆ ಇರಿಸುತ್ತಿದ್ದಳು; ಕಾರಣ ಇವು ವಿಮಾನ ನಿಲ್ದಾಣದಲ್ಲಿನ ಶೋಧಕಕ್ಕೆ ಸುಲಭದಲ್ಲಿ ಪತ್ತೆಯಾಗುತ್ತಿರಲಿಲ್ಲ ಎಂದು ವರದಿಗಳು ತಿಳಿಸಿವೆ.

Comments are closed.