ರಾಷ್ಟ್ರೀಯ

ರಾಜಕೀಯ ಪಕ್ಷಗಳಿಗೆ ಬರಲಿದೆ ಬಾಂಡ್‌: ಬ್ಯಾಂಕ್‌ಗಳ ಮೂಲಕವೇ ಇನ್ನೂ ದೇಣಿಗೆ ಸಲ್ಲಿಕೆ

Pinterest LinkedIn Tumblr


ಹೊಸದಿಲ್ಲಿ: ರಾಜಕೀಯ ಪಕ್ಷಗಳಿಗೆ ಇನ್ನು ದೇಣಿಗೆ ಪಡೆಯುವುದು ತುಸು ಕಷ್ಟವಾಗಬಹುದು.

ಚುನಾವಣೆಯ ದೇಣಿಗೆ ಸಂಗ್ರಹದ ಲೆಕ್ಕ ಕೂಡ ಪಕ್ಕಾ ಆಗಿರಲಿ ಎಂದು ಕೇಂದ್ರ ಸರ್ಕಾರ ಈಗ ಹೊಸದಾಗಿ ಪಕ್ಷಗಳಿಗಾಗಿ ಬಾಂಡ್‌ ಗಳನ್ನು ತರಲು ನಿರ್ಧರಿಸಿದೆ.

ಈ ಬಾಂಡ್‌ಗಳನ್ನು ಎಸ್‌ಬಿಐ ಮೂಲಕವೇ ಪಡೆಯಬೇಕಾಗಿದೆ. ಈ ವಿಷಯವನ್ನು ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ಲೋಕಸಭೆಯಲ್ಲಿ ತಿಳಿಸಿದರು.

1,000, 10,000, 1,00,000 ಹಾಗೂ ಹತ್ತು ಲಕ್ಷ, ಕೋಟಿ ರೂಪಾಯಿಗಳನ್ನು ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡಬೇಕಾದರೆ ಬಾಂಡ್‌ಗಳನ್ನು ಪಡೆದುಕೊಂಡೇ ಪಾವತಿಸಬೇಕಾಗುತ್ತದೆ.

ಎಸ್‌ಬಿಐನಲ್ಲಿ ಬಾಂಡ್‌ ಪಡೆದು ಹದಿನೈದು ದಿನದೊಳಗೆ ಅವುಗಳನ್ನು ನೋಂದಾಯಿತ ರಾಜಕೀಯ ಪಕ್ಷಗಳ ಬ್ಯಾಂಕ್‌ ಖಾತೆಗೆ ವರ್ಗಾಯಿಸಬಹುದಾಗಿದೆ.

ಹಣ ನೀಡಿ ಈ ಬಾಂಡ್‌ಗಳನ್ನು ಪಡೆಯುವವರ ಹೆಸರುಗಳನ್ನು ನಮೂದಿಸುವುದಿಲ್ಲ. ಆದರೆ ಅವರು ಅಗತ್ಯ ಕೆವೈಸಿ ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ ಎಂದು ಹಣಕಾಸು ಸಚಿವಾಲಯ ಸ್ಪಷ್ಟಪಡಿಸಿದೆ.

Comments are closed.