ರಾಷ್ಟ್ರೀಯ

ಡಿ.31ರ ನಂತರ ಈ ಬ್ಯಾಂಕ್ ಗಳ ಚೆಕ್ ಪುಸ್ತಕಕ್ಕೆ ಇಲ್ಲ ಮಾನ್ಯತೆ!

Pinterest LinkedIn Tumblr


ನವದೆಹಲಿ: ಬ್ಯಾಂಕ್ ಗ್ರಾಹಕರೇ ಗಮನಿಸಿ… ಡಿಸೆಂಬರ್ 31ರ ನಂತರ ಈ ಬ್ಯಾಂಕ್ ಗಳ ಚೆಕ್ ಪುಸ್ತಕ ಉಪಯೋಗಕ್ಕೆ ಬರುವುದಿಲ್ಲ. ಹೌದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಸಹವರ್ತಿ ಬ್ಯಾಂಕ್ ಗಳಾದ ಭಾರತೀಯ ಜನತಾ ಮಹಿಳಾ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಪಟಿಯಾಲಾ, ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಸ್ಟೇಟ್ ಬ್ಯಾಂಕ್ ಆಫ್ ಬಿಕಾನೇರ್ ಮತ್ತು ಜೈಪುರ್. ಸ್ಟೇಟ್ ಬ್ಯಾಂಕ್ ಆಫ್ ರಾಯ್ ಪುರ್, ಸ್ಟೇಟ್ ಬ್ಯಾಂಕ್ ಆಫ್ ಟ್ರಾವಂಕೂರ್ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್ ಗಳ ಚೆಕ್ ಪುಸ್ತಕ ಡಿಸೆಂಬರ್ 31ರ ನಂತರ ಅಮಾನ್ಯವಾಗಲಿದೆ ಎಂದು ಮಾಧ್ಯಮದ ವರದಿ ತಿಳಿಸಿದೆ.

ಈ ಹಿನ್ನೆಲೆಯಲ್ಲ ಎಸ್ ಬಿಐ ಸಹವರ್ತಿತ ಬ್ಯಾಂಕ್ ಖಾತೆದಾರರು ನೂತನ ಐಎಫ್ ಎಸ್ ಸಿ ಕೋಡ್ ಹೊಂದಿರುವ ನೂತನ ಚೆಕ್ ಪುಸ್ತಕವನ್ನು ಪಡೆದುಕೊಳ್ಳಬೇಕಾಗಲಿದೆ. ಈ ಬ್ಯಾಂಕ್ ಗಳು ಎಸ್ ಬಿಐನಲ್ಲಿ ವಿಲೀನಗೊಂಡ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 30ರ ಬಳಿಕ ಚೆಕ್ ಪುಸ್ತಕಕ್ಕೆ ಮಾನ್ಯತೆ ಇಲ್ಲ ಎಂದು ತಿಳಿಸಿತ್ತು.

ಆದರೆ ಸಹವರ್ತಿತ ಬ್ಯಾಂಕ್ ಗ್ರಾಹಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ನೂತನ ಚೆಕ್ ಪುಸ್ತಕ ಪಡೆಯಲು ಡಿಸೆಂಬರ್ 31ರವರೆಗೆ ಗಡುವನ್ನು ವಿಸ್ತರಿಸಿ ಆರ್ ಬಿಐ ಆದೇಶ ನೀಡಿತ್ತು ಎಂದು ವರದಿ ತಿಳಿಸಿದೆ.

ಹೊಸ ಚೆಕ್ ಪುಸ್ತಕ ಪಡೆಯೋದು ಹೇಗೆ?

ಹೊಸ ಚೆಕ್ ಪುಸ್ತಕಕ್ಕಾಗಿ ಅಪ್ಲೈ ಮಾಡಬೇಕು, ಇಲ್ಲವೇ ಗ್ರಾಹಕರು ಸಮೀಪದ ಎಸ್ ಬಿಐ ಶಾಖೆಗಳಿಗೆ ಭೇಟಿ ನೀಡಬೇಕು ಅಥವಾ ಎಟಿಎಂ, ಮೊಬೈಲ್ ಆಪ್ ಮೂಲಕ ಚೆಕ್ ಪುಸ್ತಕ ಪಡೆಯಲು ಸಹಾಯಕವಾಗುತ್ತದೆ.

-ಉದಯವಾಣಿ

Comments are closed.