ರಾಷ್ಟ್ರೀಯ

ಮಹಿಳೆಯ ಮೇಲೆ ಹರಿದ ಕಾರು; ಅಜಿಂಕ್ಯ ರಹಾನೆ ಅಪ್ಪನ ಬಂಧನ

Pinterest LinkedIn Tumblr


ಹೊಸದಿಲ್ಲಿ: ಕಾರು ಅಪಘಾತ ಪ್ರಕರಣವೊಂದಕ್ಕೆ ಸಂಬಂಧಪಟ್ಟಂತೆ ಭಾರತೀಯ ಟೆಸ್ಟ್ ಕ್ರಿಕೆಟ್ ತಂಡದ ಉಪನಾಯಕ ಅಜಿಂಕ್ಯ ರಹಾನೆ ಅಪ್ಪ ಮಧುಕರ್ ಬಾಬುರಾವೂ ರಹಾನೆ ಅವರನ್ನು ಬಂಧಿಸಲಾಗಿದೆ.

ಶುಕ್ರವಾರ ಕೋಹ್ಲಾಪುರದಲ್ಲಿ ನಡೆದ ಘಟನೆಯಲ್ಲಿ 67ರ ಹರೆಯದ ಮಹಿಳೆಯ ಮೇಲೆ ಅಜಿಂಕ್ಯ ಅಪ್ಪ ಮಧುಕರ್ ಕಾರು ಹರಿಸಿದ್ದರು.

ಕಾಗಲ್ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ಘಟನೆ ನಡೆದಿದ್ದು, ಆಶಾತಾಯಿ ಕಾಂಬ್ಲೆ (54) ಬಳಿಕ ಸ್ಥಳೀಯ ಆಸ್ಪತ್ರೆಗೆ ದಾಖಲಾತಿ ಮಾಡಿದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದರು.

ಕಾಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮಧುಕರ್ ರಹಾನೆ ವಿರುದ್ಧ ದೂರು ದಾಖಲಿಸಲಾಗಿದೆ.

ಅಪಘಾತ ವೇಳೆ ಯಾರು ಕಾರನ್ನು ಚಾಲನೆ ಮಾಡುತ್ತಿದ್ದರು ಎಂಬುದು ತಿಳಿದು ಬಂದಿಲ್ಲ. ರಹಾನೆ ತಾಯಿ, ಸೋದರಿ ಸೇರಿದಂತೆ ಕುಟುಂಬದವರು ರಜಾ ದಿನಗಳನ್ನು ಕಳೆಯಲು ಕೊಂಕಣ್‌ಗೆ ತೆರಳುತ್ತಿದ್ದರು. ಈ ವೇಳೆ ಅಪಘಾತ ಸಂಭವಿಸಿತ್ತು.

Comments are closed.