ರಾಷ್ಟ್ರೀಯ

ಜಿಶಾ ಪ್ರಕರಣ: ಅತ್ಯಾಚಾರವೆಸಗಿ, ಬರ್ಬರವಾಗಿ ಕೊಂದವನಿಗೆ ಗಲ್ಲು

Pinterest LinkedIn Tumblr


ಹೊಸದಿಲ್ಲಿ: ಅತ್ಯಾಚಾರವೆಸಗಿ, ನಿರ್ಭಯಾ ಹತ್ಯೆಯಂತೆಯೇ ಬರ್ಬರವಾಗಿ ಕೊಲೆ ಮಾಡಿದ ಪಾಪಿಗೆ ಕೇರಳದ ಎರ್ನಾಕುಲಂ ಸೆಷನ್ಸ್ ಕೋರ್ಟ್ ಗಲ್ಲು ಶಿಕ್ಷೆ ವಿಧಿಸಿ, ಇಂದು ಶಿಕ್ಷೆ ಪ್ರಕಟಿಸಿದೆ.

ಸಂತ್ರಸ್ತೆ ಜಿಶಾ ಕೊಲೆ ಪ್ರಕರಣದ ವಿಚಾರಣೆ ನಡೆಸಿದ ಕೋರ್ಟ್, ಮಂಗಳವಾರ ಅಮೀರುಲ್ ಇಸ್ಲಾಮ್‌ನನ್ನು ದೋಷಿ ಎಂದು ಘೋಷಿಸಿತ್ತು.

ಜಿಶಾ ಎಂಬ ಕಾನೂನು ವಿದ್ಯಾರ್ಥಿನಿಯನ್ನು ಪೆರಂಬವೂರ್‌ನಲ್ಲಿ ಏಪ್ರಿಲ್ 28, 2016ರಂದು ಅಮೀರುಲ್ ಅತ್ಯಾಚಾರವೆಸಗಿ, ಬರ್ಬರವಾಗಿ ಕೊಲೆ ಮಾಡಿದ್ದ. ಅಸ್ಸಾಂ ಮೂಲದ ಅಮೀರುಲ್ 10 ವರ್ಷದವನಿರುವಾಗಲೇ ಮನೆಯನ್ನು ತ್ಯಜಿಸಿದ್ದನೆಂದು ಆತನ ಕುಟುಂಬ ಹೇಳಿದೆ.

ಈ ಪ್ರಕರಣದ ವಿಚಾರಣೆ ಒಟ್ಟು 85 ದಿನಗಳ ಕಾಲ ನಡೆದಿದ್ದು. 15 ವಲಸೆ ಕಾರ್ಮಿಕರು ಸೇರಿ 100 ಸಾಕ್ಷಿದಾರರ ವಿಚಾರಣೆ ನಡೆಸಲಾಗಿತ್ತು. ಅಲ್ಲದೇ ಇಸ್ಲಾಂ ವಿರುದ್ಧ ಇದ್ದ ಸಾಂದರ್ಭಿಕ ಸಾಕ್ಷ್ಯಧಾರಗಳನ್ನು ಪರಿಗಣಿಸಿ, ದೋಷಿಯೆಂದ ಘೋಷಿಸಿ, ಗಲ್ಲು ಶಿಕ್ಷೆ ವಿಧಿಸಲಾಗಿದೆ.

ಒಂದು ಕೊಠಡಿ ಮನೆಯಲ್ಲಿ ಜಿಶಾಳನ್ನು ಕಾಮಿ ಅಮೀರುಲ್ ಅತ್ಯಾಚಾರವೆಸಗಿ, ಆಕೆಯ ಖಾಸಗಿ ಭಾಗವನ್ನು ಕತ್ತರಿಸಿ ಹಾಕಿದ್ದ. ತನಿಖೆ ವೇಳೆ ಮತ್ತೊಬ್ಬ ವಲಸೆ ಕಾರ್ಮಿಕ ಅನಾರುಲ್ ಇಸ್ಲಾಂ ಎಂಬುವವನ್ನು ಈ ಕೃತ್ಯವೆಸಗಲು ಪ್ರೇರೇಪಿಸಿದ್ದ ಎಂದು ದೋಷಿ ಹೇಳಿದ್ದ. ಆದರೆ, ಅನಾರುಲ್ ಈ ಕೃತ್ಯ ನಡೆಯುವ ಕೆಲವು ತಿಂಗಳ ಮೊದಲೇ ಊರು ಬಿಟ್ಟಿದ್ದಾಗಿ ತನಿಖೆಯಿಂದ ತಿಳಿದುಬಂದಿತ್ತು.

ಈ ಕೊಲೆಗೆ ಯಾವುದೇ ಸಾಕ್ಷಿಗಳು ಇಲ್ಲದಿದ್ದರೂ, ಜಿಶಾ ಮನೆಯಿಂದ ಅಮೀರುಲ್ ಹೊರ ಬಂದಿದ್ದನ್ನು ನೆರೆಹೊರೆಯಲ್ಲೊಬ್ಬರು ನೋಡಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ 30ಕ್ಕೂ ಹೆಚ್ಚು ಶಂಕಿತರನ್ನು ವಿಚಾರಣೆ ನಡೆಸಿ, 1500 ಮಂದಿ ಹೇಳಿಕೆಯನ್ನು ದಾಖಲಿಸಿಕೊಂಡಿತ್ತು. ಸುಮಾರು 20 ಲಕ್ಷ ಕರೆಗಳ ದಾಖಲೆಗಳನ್ನು ತನಿಖಾ ತಂಡ ವಿಶ್ಲೇಷಿಸಿದೆ. ಅಲ್ಲದೇ ಸುಮಾರು 5 ಸಾವಿರ ಮಂದಿಯ ಬೆರಳಚ್ಚು ಪರೀಕ್ಷಿಸಿ, 23 ಶಂಕಿತರ ಡಿಎನ್‌ಎ ಪರೀಕ್ಷಿಸಲಾಗಿತ್ತು.

Comments are closed.