ರಾಷ್ಟ್ರೀಯ

ಇನ್ನು ಮುಂದೆ ಬೆಳಗ್ಗೆ 6ರಿಂದ ರಾತ್ರಿ 10 ಗಂಟೆಯವರೆಗೂ ಟಿವಿಗಳಲ್ಲಿ ಕಾಂಡೋಮ್ ಕುರಿತ ಜಾಹಿರಾತು ಪ್ರಸಾರವಿಲ್ಲ

Pinterest LinkedIn Tumblr

ನವದೆಹಲಿ: ಇನ್ನು ಮುಂದೆ ಬೆಳಗ್ಗೆ 6ರಿಂದ ರಾತ್ರಿ 10 ಗಂಟೆಯವರೆಗೂ ಟಿವಿಗಳಲ್ಲಿ ಕಾಂಡೋಮ್ ಕುರಿತ ಜಾಹಿರಾತು ಪ್ರದರ್ಶನ ಮಾಡಬಾರದು ಎಂದು ಕೇಂದ್ರ ಸರ್ಕಾರ ವಾಹಿನಿಗಳಿಗೆ ನಿರ್ದೇಶನ ನೀಡಿದೆ.

ಈ ಬಗ್ಗೆ ಕೇಂದ್ರ ಮಾಹಿತಿ ಮತ್ತು ಪ್ರಸಾರ ಇಲಾಖೆ ಆದೇಶ ಹೊರಡಿಸಿದ್ದು, ರಾತ್ರಿ 10 ಗಂಟೆ ಮೇಲಷ್ಟೇ ಕಾಂಡೋಮ್ ಜಾಹಿರಾತುಗಳನ್ನು ಪ್ರಸಾರ ಮಾಡಬೇಕು ಎಂದು ಆದೇಶಿಸಿದೆ. ಇತ್ತೀಚೆಗೆ ಹಗಲು ಹೊತ್ತಿನಲ್ಲಿ ಪ್ರಸಾರವಾಗುತ್ತಿರುವ ಕಾಂಡೋಮ್ ಜಾಹಿರಾತುಗಳು ಅಸಭ್ಯವಾಗಿದ್ದು, ಮಕ್ಕಳು ಮತ್ತು ಕುಟುಂಬಸ್ಥರ ಜೊತೆ ವೀಕ್ಷಿಸಲು ಮುಜುಗರವಾಗುತ್ತಿದೆ ಎಂಬ ಸತತ ಮನವಿಗಳು ಬಂದ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ಈ ಕ್ರಮ ಕೈಗೊಂಡಿದೆ.

ಇನ್ನು ಇತ್ತೀಚೆಗಷ್ಟೇ ಬಾಲಿವುಡ್ ನಟ ಸಲ್ಮಾನ್ ಖಾನ್ ತಮ್ಮ ನಿರೂಪಣೆಯ ಬಿಗ್ ಬಾಸ್ ಕಾರ್ಯಕ್ರಮದ ನಡುವೆ ಪ್ರಸಾರವಾಗುತ್ತಿದ್ದ ಕಾಂಡೋಮ್ ಜಾಹಿರಾತನ್ನು ಕೂಡಲೇ ತೆಗೆದು ಹಾಕುವಂತೆ ವಾಹಿನಿಗೆ ತಿಳಿಸಿದ್ದರು. ಆ ಜಾಹಿರಾತಿನಲ್ಲಿ ನಟಿ ಬಿಪಾಶ ಬಸು ಹಾಗೂ ಅಕೆಯ ಪತಿ ಕರಣ್ ಸಿಂಗ್ ಗ್ರೋವರ್ ನೊಂದಿಗೆ ತೀರಾ ಕೆಟ್ಟದಾಗಿ ಜಾಹಿರಾತು ನೀಡಿದ್ದಾರೆ ಎಂಬ ಕಾರಣಕ್ಕೆ ಸಲ್ಮಾನ್ ಈ ಜಾಹಿರಾತು ವಿರೋಧಿಸಿದ್ದರು.

ಇದೀಗ ಸ್ವತಃ ಕೇಂದ್ರ ಸರ್ಕಾರವೇ ಕಾಂಡೋಮ್ ಜಾಹಿರಾತುಗಳ ಪ್ರಸಾರದ ಅವಧಿ ಮೇಲೆ ನಿಯಂತ್ರಣ ಹೇರಿದೆ.

Comments are closed.