ರಾಷ್ಟ್ರೀಯ

ಉಪನ್ಯಾಸಕಿ ಸ್ನಾನ ಮಾಡುತ್ತಿದ್ದುದ್ದನ್ನು ವೀಡಿಯೋ ಶೂಟ್ ಮಾಡಿ ಸಿಕ್ಕಿ ಬಿದ್ದ ಯುವಕ

Pinterest LinkedIn Tumblr

ಹೈದರಾಬಾದ್: ಉಪನ್ಯಾಸಕಿಯೊಬ್ಬರು ಸ್ನಾನ ಮಾಡುತ್ತಿದ್ದ ವೇಳೆ ವೀಡಿಯೋ ಚಿತ್ರೀಕರಣ ಮಾಡುತ್ತಿದ್ದ 25 ವರ್ಷದ ಯುವಕನೊಬ್ಬನನ್ನು ಹೈದರಾಬಾದ್ ಪೊಲೀಸರು ಶನಿವಾರ ಬಂಧಿಸಿದ್ದಾರೆ.

ಇಲ್ಲಿನ ಕೆಪಿಎಚ್‍ಬಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಪಿಜಿ ಹಾಸ್ಟೆಲ್ ನಲ್ಲಿ ಉಪನ್ಯಾಸಕಿಯೊಬ್ಬರು ವಾಸ್ತವ್ಯ ಹೂಡಿದ್ದರು. ಕಳೆದ ಗುರುವಾರ ಇವರು ಸ್ನಾನ ಮಾಡುತ್ತಿದ್ದಾಗ ಬಾತ್ ರೂಂ ಕಿಟಕಿಯಿಂದ ಮೊಬೈಲ್ ಫೋನೊಂದು ಕಾಣಿಸಿದೆ. ವೆಂಟಿಲೇಟರ್ ಮೂಲಕ ಮೊಬೈಲ್ ಕಾಣಿಸುತ್ತಿದ್ದಂತೆಯೇ ಉಪನ್ಯಾಸಕಿ ಕಿರುಚಾಡಲು ಆರಂಭಿಸಿದ್ದಾರೆ. ತಕ್ಷಣ ಆರೋಪಿ ಅಲ್ಲಿಂದ ಕಾಲ್ಕಿತ್ತಿದ್ದಾನೆ.

ಬಳಿಕ ಉಪನ್ಯಾಸಕಿ ಕೆಪಿಎಚ್‍ಬಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ನಾನು ಸ್ನಾನ ಮಾಡುವಾಗ ಯಾರೋ ಬಾತ್ ರೂಂ ವೆಂಟಿಲೇಟರ್ ಮೂಲಕ ಮೊಬೈಲ್ ನಲ್ಲಿ ವೀಡಿಯೋ ಶೂಟ್ ಮಾಡಿದ್ದಾರೆ. ಆ ವ್ಯಕ್ತಿಯ ಕೈಯಲ್ಲಿದ್ದ ಮೊಬೈಲ್ ಗೋಲ್ಡ್ ಕಲರ್ ನಲ್ಲಿತ್ತು ಎಂದು ದೂರಿನಲ್ಲಿ ತಿಳಿಸಿದ್ದರು.

ದೂರು ಸ್ವೀಕರಿಸಿದ ಪೊಲೀಸರು ಪಿಜಿ ಹಾಸ್ಟೆಲ್ ಗೆ ಆಗಮಿಸಿ, ಗೋಲ್ಡನ್ ಬಣ್ಣದ ಮೊಬೈಲ್ ಇರುವವರ ಹುಡುಕಾಟ ಶುರು ಮಾಡಿದ್ದಾರೆ. ಈ ವೇಳೆ ಇದೇ ಹಾಸ್ಟೆಲ್ ಮಾಲೀಕನ ಪುತ್ರ ಚಂದ್ರಹಾಸ್ ಎಂಬಾತನ ಬಳಿ ಚಿನ್ನದ ಬಣ್ಣದ ಮೊಬೈಲ್ ಪತ್ತೆಯಾಗಿದೆ.

ಇದನ್ನು ಪರಿಶೀಲನೆ ಮಾಡಿದಾಗ ಮೊಬೈಲ್ ನಲ್ಲಿ ಯಾವುದೇ ವೀಡಿಯೋ ಇರಲಿಲ್ಲ. ಇದರಿಂದ ಅನುಮಾನಗೊಂಡು ಪೊಲೀಸರು ಆತನನ್ನು ವಶಕ್ಕೆ ಪಡೆದು ವಿಚಾರಣೆ ಶುರು ಮಾಡಿದ್ದಾರೆ. ಯಾವಾಗ ತಾನಿನ್ನು ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ ಎಂದು ಗೊತ್ತಾಗುತ್ತೋ ಚಂದ್ರಹಾಸ್ ತಪ್ಪೊಪ್ಪಿಕೊಳ್ಳುತ್ತಾನೆ. ‘ನಾನೇ ವೀಡಿಯೋ ಶೂಟ್ ಮಾಡಿದ್ದೆ. ಕೇವಲ 10 ಸೆಕೆಂಡ್ ಮಾತ್ರ ವೀಡಿಯೋ ಶೂಟ್ ಮಾಡಿದ್ದೆ. ಅಷ್ಟರಲ್ಲಿ ಉಪನ್ಯಾಸಕಿಗೆ ವಿಚಾರ ಗೊತ್ತಾಗಿ ಗದ್ದಲ ಶುರು ಮಾಡಿದರು. ಇದರಿಂದಾಗಿ ನಾನು ಸಿಕ್ಕಿಹಾಕಿಕೊಳ್ಳುತ್ತೇನೆ ಎಂಬ ಭಯದಲ್ಲಿ ನಾನು ಆ ವಿಡಿಯೋ ಡಿಲೀಟ್ ಮಾಡಿದೆ’ ಎಂದು ಹೇಳಿದ್ದಾನೆ. ಪೊಲೀಸರು ಆರೋಪಿ ಚಂದ್ರಹಾಸನನ್ನು ಕೋರ್ಟ್ ಗೆ ಹಾಜರುಪಡಿಸಿದ್ದಾರೆ. ಕೋರ್ಟ್ ಚಂದ್ರಹಾಸನಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

Comments are closed.