ರಾಷ್ಟ್ರೀಯ

ಇನ್ನು ಮುಂದೆ 24X7 ವಿದ್ಯುತ್ ಪೂರೈಕೆ, ಪವರ್ ಕಟ್ ಮಾಡಿದರೆ ದಂಡ

Pinterest LinkedIn Tumblr


ಹೊಸದಿಲ್ಲಿ: ವಿದ್ಯುತ್ ಕಳ್ಳತನ ತಡೆಗೆ ಪ್ರೀಪೇಯ್ಡ್ ಅಥವಾ ಸ್ಮಾರ್ಟ್ ಮೀಟರ್ ಅಳವಡಿಸುವುದು ಕಡ್ಡಾಯಗೊಳಿಸುವುದರೊಂದಿಗೆ, ಈ ವರ್ಷದ ಅಂತ್ಯದೊಳಗೆ ತಡೆ ರಹಿತ ವಿದ್ಯುತ್ ನೀಡಲು ಸರಕಾರ ಚಿಂತಿಸಿದೆ.

16 ಸಾವಿರ ಕೋಟಿ ರೂ.ನ ಸೌಭಾಗ್ಯ ಯೋಜನೆಯಡಿ ಮಾರ್ಚ್‌ 2019ರೊಳಗೆ ಸರ್ವರಿಗೂ 24X7 ವಿದ್ಯುತ್ ಪೂರೈಸುವ ಗುರಿಯನ್ನು ಸರಕಾರ ಹೊಂದಿದೆ. ತಾಂತ್ರಿಕ ದೋಷ ಅಥವಾ ಪ್ರಕೃತಿ ವಿಕೋಪಗಳ ಕಾರಣಗಳನ್ನು ಹೊರತುಪಡಿಸಿ, ಸುಖಾ ಸುಮ್ಮನೆ ವಿದ್ಯುತ್ ಕಡಿತಗೊಳಿಸಿದರೆ, ವಿದ್ಯುತ್ ಪೂರೈಕೆದಾರರಿಗೆ ದಂಡ ವಿಧಿಸಲಾಗುತ್ತದೆ.

ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಇಂಧನ ಮತ್ತು ಹೊಸ ಹಾಗೂ ನವೀಕರಣಗೊಳಿಸಬಹುದಾದ ಇಂಧನ ಸಚಿವರ ಸಮ್ಮೇಳನದ ನಂತರ, ಇಂಧನ ಸಚಿವ ಆರ್.ಕೆ.ಸಿಂಗ್ ಈ ವಿಷಯವನ್ನು ತಿಳಿಸಿದ್ದಾರೆ.

ಪ್ರೀ ಪೇಯ್ಡ್ ಮೀಟರ್ ಅಳವಡಿಕೆ ಹಾಗೂ ಫಲಾನುಭವಿಗಳಿಗೆ ನೇರ ಲಾಭ ವರ್ಗಾಯಿಸಲು ಹಾಗೂ 24×7 ವಿದ್ಯುತ್ ಪೂರೈಸಲು ದೇಶದ ಬಹುತೇಕ ರಾಜ್ಯಗಳು ಒಪ್ಪಿವೆ, ಎಂದು ಸಚಿವರು ತಿಳಿಸಿದ್ದಾರೆ.

ಇನ್ನು ಮುಂದೆ ಮೀಟರಿಂಗ್, ಬಿಲ್ ಸಂಗ್ರಹಕ್ಕೆ ಸಂಬಂಧಿಸಿದಂತೆ ಮಾನವ ಸಂಪರ್ಕವಿಲ್ಲದಂತೆ ಮಾಡಲಾಗುವುದು. ಮೊಬೈಲ್ ಮೂಲಕವೇ ವಿದ್ಯುತ್ ಬಿಲ್ ಕಟ್ಟುವ ವ್ಯವಸ್ಥೆ ಮಾಡಲಾಗುವುದು. ಆದರೆ, ಈ ಕಾರ್ಯಕ್ಕೆ ಯಾವುದೇ ಕಾಲ ಮಿತಿ ನಿಗದಿಗೊಳಿಸಿಲ್ಲ. ಅಲ್ಲದೇ ಪೂರೈಕೆದಾರರಿಗೆ ಆಗುವ ನಷ್ಟವನ್ನು ಸರಿದೂಗಿಸಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ, ಸಚಿವರು ಭರವಸೆ ನೀಡಿದ್ದಾರೆ.

Comments are closed.