ರಾಷ್ಟ್ರೀಯ

ಬದುಕಿದರೂ ‘ಸತ್ತಿದೆ’ ಎಂದು ಘೋಷಿಸಿದ ಮಗು ಕೊನೆಗೂ ಸಾವು

Pinterest LinkedIn Tumblr


ಹೊಸದಿಲ್ಲಿ: ದಿಲ್ಲಿ ಮ್ಯಾಕ್ಸ್ ಆಸ್ಪತ್ರೆ ನಿರ್ಲಕ್ಷ್ಯದಿಂದ ‘ಮೃತಪಟ್ಟಿದೆ’ ಎಂದು ನಿರ್ಲಕ್ಷ್ಯವಾಗಿ ಘೋಷಿಸಿದ ಶಿಶು ಇದೀಗ ಕೊನೆಯುಸಿರೆಳೆದಿದೆ.

ನಾನಗ್ಲೋಯಿಯ ನಿವಾಸಿಗೆ ಅವಧಿ ಪೂರ್ಣವಾಗುವ ಮುನ್ನವೇ ಹುಟ್ಟಿದ ಅವಳಿ ಮಕ್ಕಳು ಜನಿಸುವಾಗಲೇ ಮೃತಪಟ್ಟಿವೆ ಎಂದು ವೈದ್ಯರು ಘೋಷಿಸಿದ್ದರು. ಆದರೆ, ಅಂತ್ಯ ಸಂಸ್ಕಾರದ ವೇಳೆ ಒಂದು ಮಗು ಚಲನೆಯಲ್ಲಿರುವುದನ್ನು ಪೋಷಕರು ಗಮನಿಸಿದ್ದರು. ಕೂಡಲೇ ಸಮೀಪದ ನರ್ಸಿಂಗ್ ಹೋಂಗೆ ಹೋಗಿ ಪರೀಕ್ಷಿಸಿದಾಗ ಮಗುವಿಗೆ ಜೀವವಿರುವುದು ದೃಢ ಪಟ್ಟಿತ್ತು. ಚಿಕಿತ್ಸೆ ಪಡೆಯುತ್ತಿದ್ದ ಕಂದಮ್ಮನೀಗ ನಿಜವಾಗಲೂ ಕೊನೆಯುಸಿರೆಳೆದಿದೆ.

ನವೆಂಬರ್ 30ರಂದು ಜನಿಸಿದ ಅವಳಿ ಗಂಡು ಹಾಗೂ ಹೆಣ್ಣು ಮಕ್ಕಳು ಮೃತಪಟ್ಟಿವೆ, ಎಂದು ಮ್ಯಾಕ್ಸ್ ಆಸ್ಪತ್ರೆ ಘೋಷಿಸಿತ್ತು. ಕವರ್‌ವೊಂದರಲ್ಲಿ ಪೋಷಕರಿಗೆ ಮೃತ ದೇಹಗಳನ್ನು ಆಸ್ಪತ್ರೆ ಹಸ್ತಾಂತರಿಸಿತ್ತು. ಆದರೆ, ಅದರಲ್ಲಿ ಬದುಕಿದ್ದ ಗಂಡು ಮಗು ನಿನ್ನೆ ಕೊನೆಯುಸಿರೆಳೆದಿದೆ, ಎಂದು ಉಪ ಪೊಲೀಸ್ ಆಯುಕ್ತ ಅಸ್ಲಾಂ ಖಾನ್ ಖಚಿತಪಡಿಸಿದ್ದಾರೆ.

ಈ ಪ್ರಕರಣದ ತನಿಖೆ ನಡೆಸಲು ದಿಲ್ಲಿ ಸರಕಾರ ಸಮಿತಿಯೊಂದನ್ನು ರಚಿಸಿದ್ದು, ಮ್ಯಾಕ್ಸ್ ಆಸ್ಪತ್ರೆ ವೈದ್ಯಕೀಯ ನಿಯಮವನ್ನು ಉಲ್ಲಂಘಿಸಿರುವುದಾಗಿ ವರದಿ ನೀಡಿದೆ.

Comments are closed.