ರಾಷ್ಟ್ರೀಯ

2019 ಚುನಾವಣೆಗೆ ರಾಮಮಂದಿರಕ್ಕೂ ಸಂಬಂಧ ಬೇಡ: ಕಾಂಗ್ರೆಸ್‌ಗೆ ಮೋದಿ ತಿರುಗುಬಾಣ

Pinterest LinkedIn Tumblr


ಹೊಸದಿಲ್ಲಿ: ಅಯೋಧ್ಯೆಯಲ್ಲಿರುವ ಬಾಬರಿ ಮಸೀದಿ ಧ್ವಂಸವಾಗಿ ಡಿಸೆಂಬರ್‌ 6ಕ್ಕೆ 25 ವರ್ಷಗಳಾಗಿದೆ. ಆದರೆ 2019ರ ಚುನಾವಣೆಗೂ ರಾಮಮಂದಿರ ನಿರ್ಮಾಣಕ್ಕೆ ಸಂಬಂಧ ಕಲ್ಪಿಸುವ ಮೂಲಕ ಕಾಂಗ್ರೆಸ್‌ ಕ್ಷುಲ್ಲಕ ರಾಜಕೀಯ ಮಾಡುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿರುಗೇಟು ನೀಡಿದ್ದಾರೆ.

ರಾಮಮಂದಿರ ವಿವಾದ ಸಂಬಂಧ ಸುಪ್ರೀಂ ಕೋರ್ಟ್‌ನಲ್ಲಿ ವಾದ ಮಂಡಿಸಿ ಕಾಂಗ್ರೆಸ್‌ ನಾಯಕ, ವಕೀಲ ಕಪಿಲ್‌ ಸಿಬಲ್‌, 2019ರ ಚುನಾವಣೆವರೆಗೂ ವಿಚಾರಣೆ ಮುಂದೂಡಬೇಕೆಂದು ಒತ್ತಾಯಿಸಿದ್ದರು. ಇದಕ್ಕೆ ಮೋದಿ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.

ಸುಪ್ರೀಂ ಕೋರ್ಟ್‌ನಲ್ಲಿ ಕಪಿಲ್ ಸಿಬಲ್‌ ಬಾಬರಿ ಮಸೀದಿ ಪರವಾಗಿ ವಾದ ಮಂಡಿಸಿದರು. ಇದು ಅವರ ಹಕ್ಕು. ಆದರೆ 2019ರ ಚುನಾವಣೆ ವರೆಗೂ ಮುಂದೂಡಬೇಕು ಎಂದು ಹೇಳುವುದಕ್ಕೆ ಅವರಿಗೆ ಯಾವ ಹಕ್ಕಿದೆ ಎಂದು ಮೋದಿ ಪ್ರಶ್ನಿಸಿದ್ದಾರೆ.

ಆದರೆ ಕಪಿಲ್‌ ಸಿಬಲ್‌ ವಾದವನ್ನು ತಿರಸ್ಕರಿಸಿದ್ದ ಸುಪ್ರೀಂ ಕೋರ್ಟ್‌ ನ್ಯಾಯಪೀಠ, ಫೆಬ್ರವರಿ 8ರಿಂದ ವಿಚಾರಣೆ ಆರಂಭಿಸಲಾಗುವುದು ಎಂದು ಸ್ಪಷ್ಟಪಡಿಸಿದೆ.

Comments are closed.