
ಜೈಪುರ: ಹೆಲ್ಮೆಟ್ ಹಾಕದೆ ದ್ವಿಚಕ್ರ ವಾಹನ ಚಲಾಯಿಸುತ್ತಿದ್ದವರಿಗೆ ಪೊಲೀಸರು ದಂಡ ಹಾಕುವುದು ಸಾಮಾನ್ಯ. ಆದರೆ ಇಲ್ಲೊಬ್ಬ ವ್ಯಕ್ತಿ ಹೆಲ್ಮೆಟ್ ಹಾಕಿಕೊಂಡು ಗಾಡಿ ಓಡಿಸಿದ್ದಕ್ಕೆ ದಂಡ ಹಾಕಿದ್ದಾರೆ. ಅಷ್ಟಕ್ಕೂ ಈ ವ್ಯಕ್ತಿ ಓಡಿಸಿದ್ದು ನಾಲ್ಕು ಚಕ್ರದ ಗಾಡಿಯನ್ನು.
ಹೆಲ್ಮೆಟ್ ಹಾಕಿ ವ್ಯಾನ್ ಓಡಿಸಿದ ಈತನ ವರ್ತನೆ ನಿಮಗೆ ವಿಚಿತ್ರ ಅನಿಸಿದರು, ಈತ ಹೆಲ್ಮೆಟ್ ಹಾಕಿ ವ್ಯಾನ್ ಓಡಿಸಲು ಕಾರಣಕರ್ತರೇ ಪೊಲೀಸರು.

23 ವರ್ಷದ ವಿಷ್ಣು ಶರ್ಮಾ ಒಂದು ದಿನ ಆಗ್ರಾದಿಂದ ತನ್ನ ಊರಾದ ಭಾರತ್‌ಪುರಕ್ಕೆ ಮರಳುತ್ತಿದ್ದಾಗ, ಈತನನ್ನು ತಡೆಗಟ್ಟಿದ ಟ್ರಾಫಿಕ್ ಪೊಲೀಸ್ ದಾಖಲೆಗಳನ್ನು ತೋರಿಸಲು ಹೇಳುತ್ತೇನೆ. ಈತ ಸೀಟ್ ಬೆಲ್ಟ್ ಹಾಕಿದ್ದ, ಅವರು ಹೇಳಿದ ಎಲ್ಲಾ ದಾಖಲೆಗಳು ಪಕ್ಕಾ ಇದ್ದೆವು. ಆದರೂ ಆತನಿಗೆ ಹೆಲ್ಮೆಟ್ ಹಾಕದ್ದಕ್ಕೆ 200 ರೂ ದಂಡ ಎಂದು ಹಾಕಿ ಚಲನ್ ನೀಡಿದರು.
ಪೊಲೀಸರ ಕಾನೂನು ಬಾಹಿರ ವರ್ತನೆ ವಿರೋಧಿಸಿ ಶರ್ಮಾ ಹೆಲ್ಮೆಟ್ ಹಾಕಿ ವ್ಯಾನ್ ಓಡಿಸಲಾರಂಭಿಸಿದರು. ಇದೀಗ ಹೆಲ್ಮೆಟ್ ಹಾಕಿ ವ್ಯಾನ್ ಓಡಿಸಿದರು ಎಂದು ಮತ್ತೆ 200 ರೂಪಾಯಿ ದಂಡ ಹಾಕಿದ್ದಾರೆ ಪೊಲೀಸರು.
Comments are closed.