ರಾಷ್ಟ್ರೀಯ

ನಮ್ಮ ನದಿಯನ್ನು ನಾವೇಕೆ ಕಲುಷಿತಗೊಳಿಸುತ್ತೇವೆ: ಸಿಯಾಂಗ್ ನದಿ ಮಲಿನಕ್ಕೆ ಚೀನಾ ಉತ್ತರ

Pinterest LinkedIn Tumblr


ಗುವಹಟಿ: ಅರುಣಾಚಲ ಪ್ರದೇಶದ ಜೀವನದಿ ಸಿಯಾಂಗ್ ನೀರು ಕಲುಷಿತಗೊಂಡು ಕಪ್ಪಾಗಿದ್ದು, ಇದಕ್ಕೆ ಚೀನಾ ಕೈಗೊಂಡಿರುವ ಕಾಮಗಾರಿಗಳೇ ಕಾರಣವೆಂದು ಭಾರತದ ಮಾಧ್ಯಮದಲ್ಲಿ ಆರೇಪಿಸಲಾಗಿತ್ತು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಚೀನಾ, ‘ಅರುಣಾಚಲ ಪ್ರದೇಶ ನಮಗೆ ಸೇರಿದ್ದು, ನಮ್ಮದೇ ನದಿಯನ್ನು ನಾವೇಕೆ ಕಲುಷಿತಗೊಳಿಸುತ್ತೇವೆ,’ ಎನ್ನುವ ಮೂಲಕ ದೇಶದ ಗಡಿ ಕ್ಯಾತೆಯನ್ನು ಮತ್ತೆ ಪ್ರಸ್ತಾಪಿಸಿದೆ.

ಸಿಯಾಂಗ್ ನದಿ ನೀರು ಕಲುಷಿತವಾಗಿದ್ದಕ್ಕೆ ಸಂಬಂಧಿಸಿದಂತೆ ಚೀನಾ ಸರಕಾರಿ ಸ್ವಾಮ್ಯದ ‘ಗ್ಲೋಬಲ್ ಟೈಮ್ಸ್’ ‘ಅರುಣಾಚಲ ನಮ್ಮದು’ ಎಂದು ಹೇಳಿ ವರದಿ ಪ್ರಕಟಿಸಿದೆ.

‘ಚೀನಾದಲ್ಲಿ ದಕ್ಷಿಣ ಟಿಬೆಟ್ ಎನ್ನುವ ಅರುಣಾಚಲ ಪ್ರದೇಶದ ಸಿಯಾಂಗ್ ನದಿ ಕಲುಷಿತಗೊಂಡಿದೆ ಎಂದು ಭಾರತೀಯ ಮಾಧ್ಯಮಗಳು ವರದಿ ಮಾಡಿವೆ. ಕೆಸರು ಸೇರಿದ್ದರಿಂದ ನದಿ ನೀರು ಕಪ್ಪಾಗಿದ್ದು, ಇದಕ್ಕೆ ಭಾರತ ಗಡಿ ಭಾಗದಲ್ಲಿ ಚೀನಾ ತೆಗೆದುಕೊಳ್ಳುತ್ತಿರುವ ನಿರ್ಮಾಣ ಕಾರ್ಯವೇ ಕಾರಣವೆಂದು ಆರೋಪಿಸಿದೆ. ಆದರೆ, ಈ ಪ್ರದೇಶ ಚೀನಾಕ್ಕೆ ಸೇರಿದ್ದಾಗಿದ್ದು, ಸ್ಥಳೀಯ ಪರಿಸರವನ್ನು ಸಂರಕ್ಷಿಸುವುದು ದೇಶದ ಕರ್ತವ್ಯ,’ ಎಂದು ಹೇಳಿ ಕೊಂಡಿದೆ.

ಟಿಬೆಟ್‌ನ ದಕ್ಷಿಣದಲ್ಲಿ ಯಾರ್ಲಂಗ್ ಸಾಗ್ಪೋ ಎಂಬನದಿ ಅರುಣಾಚಲ ಪ್ರದೇಶದ ಮೂಲಕ ಭಾರತವನ್ನು ಪ್ರವೇಶಿಸುತ್ತದೆ. ನಮ್ಮ ದೇಶದಲ್ಲಿ ಈ ನದಿಗೆ ಸಿಯಾಂಗ್ ಎಂದು ಹೆಸರಿಸಲಾಗಿದೆ.

Comments are closed.