ರಾಷ್ಟ್ರೀಯ

ಟಿಬೆಟ್‌ ಚೀನಾದೊಂದಿಗೆ ಇರಬಯಸುತ್ತದೆ: ದಲೈಲಾಮಾ

Pinterest LinkedIn Tumblr


ಕೋಲ್ಕತಾ: ಟಿಬೆಟ್‌ ಚೀನಾದಿಂದ ಸ್ವಾತಂತ್ರ್ಯ ಬಯಸುವುದಿಲ್ಲ, ಆದರೆ ಹೆಚ್ಚಿನ ಅಭಿವೃದ್ಧಿ ಬಯಸುತ್ತದೆ ಎಂದು ದಲೈಲಾಮಾ ಗುರುವಾರ ಹೇಳಿದ್ದಾರೆ.

ನಗರದಲ್ಲಿ ಭಾರತೀಯ ವಾಣಿಜ್ಯ ಮಂಡಳಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ”ಆದದ್ದಾಯಿತು. ನಾವು ಭವಿಷ್ಯದತ್ತ ನೋಡಬೇಕು. ಆಗಾಗ ಸಣ್ಣಪುಟ್ಟ ಘರ್ಷಣೆಗಳಿದ್ದರೂ ಟಿಬೆಟ್‌ ಹಾಗೂ ಚೀನಾ ನಡುವೆ ಉತ್ತಮ ಸಂಬಂಧವಿದೆ. ಟಿಬೆಟಿಯನ್‌ಗಳು ಚೀನಾದೊಂದಿಗೆ ಇರಲು ಬಯಸುತ್ತಾರೆ” ಎಂದು ಒತ್ತಿ ಹೇಳಿದರು.

ಚೀನಾದವರು ತಮ್ಮ ದೇಶವನ್ನು ಪ್ರೀತಿಸುವಂತೆ ನಾÊವೂ ನಮ್ಮ ದೇಶವನ್ನು ಪ್ರೀತಿಸುತ್ತೇವೆ.ಚೀನಾ ಟಿಬೆಟ್‌ನ ಸಂಸ್ಕೃತಿ ಮತ್ತು ಪರಂಪರೆಯನ್ನು ಗೌರವಿಸಬೇಕು ಎಂದು ಬುದ್ಧಿ ಮಾತು ಹೇಳಿದರು.

ಪ್ರಮುಖ ನದಿಗಳು ಟಿಬೆಟ್‌ನಲ್ಲಿ ಹುಟ್ಟುತ್ತವೆ. ನೂರಾರು ಕೋಟಿ ಜನರ ಬದುಕಿಗೆ ಇದು ಬೆಸೆದುಕೊಂಡಿದೆ. ಕೋಟ್ಯಂತರ ಜನರ ಒಳಿತಿಗಾಗಿ ಟಿಬೆಟ್‌ನ ರಕ್ಷ ಣೆ ಮಾಡಬೇಕು ಎಂದು ಲಾಮಾ ಕರೆ ನೀಡಿದರು.

Comments are closed.