ರಾಷ್ಟ್ರೀಯ

ಪ್ರಧಾನಿ ಮೋದಿಯನ್ನು ತುಘಲಕ್ ಎಂದ ಬಿಜೆಪಿ ಹಿರಿಯ ನಾಯಕ

Pinterest LinkedIn Tumblr


ನವದೆಹಲಿ: ಪ್ರಧಾನಿ ಮೋದಿ ಆಡಳಿತ ವೈಖರಿ, ನೋಟು ನಿಷೇಧ ನಿರ್ಧಾರವನ್ನು ಹಿರಿಯ ಬಿಜೆಪಿ ನಾಯಕ, ಮಾಜಿ ವಿತ್ತ ಸಚಿವ ಯಶವಂತ್ ಸಿನ್ಹಾ ಮತ್ತೊಮ್ಮೆ ಟೀಕಿಸಿದ್ದಾರೆ.

ಹಿಂದೊಮ್ಮೆ ಬಹಿರಂಗವಾಗಿ ಮೋದಿ ವಿರುದ್ಧ ಅಸಮಾಧಾನ ಹೊರ ಹಾಕಿದ್ದ ಯಶವಂತ್ ಸಿನ್ಹಾ ಇದೀಗ ಮತ್ತೊಮ್ಮೆ ನೋಟು ನಿಷೇಧದ ನಿರ್ಧಾರವನ್ನು ಕೆದಕಿ ಪ್ರಧಾನಿ ಮೋದಿಯದ್ದು ತುಘಲಕ್ ನಿರ್ಧಾರ ಎಂದು ಜರೆದಿದ್ದಾರೆ.

700 ವರ್ಷಗಳ ಹಿಂದೆ ದೆಹಲಿಯನ್ನು ಆಳಿದ್ದ ದೊರೆ ಮೊಹಮ್ಮದ್ ಬಿನ್ ತುಘಲಕ್ ಕೂಡಾ ನೋಟು ನಿಷೇಧದಂತಹದ್ದೇ ನಿರ್ಧಾರ ತೆಗೆದುಕೊಂಡಿದ್ದ. ಹಳೇ ನೋಟುಗಳನ್ನು ನಿಷೇಧಿಸಿ ಹೊಸ ನೋಟು ಜಾರಿಗೆ ತಂದಿದ್ದ. ಮೋದಿಯ ಕ್ರಮವೂ ತುಘಲಕ್ ನ ನಿರ್ಧಾರದಂತೇ ಇದೆ ಎಂದು ಅಹಮ್ಮದಾಬಾದ್ ನಲ್ಲಿ ಸಭೆಯೊಂದರಲ್ಲಿ ಯಶವಂತ್ ಸಿನ್ಹಾ ಹೇಳಿದ್ದಾರೆ.

Comments are closed.