ರಾಷ್ಟ್ರೀಯ

ಮೂತ್ರ ಬ್ಯಾಂಕ್‌ ಸ್ಥಾಪನೆ, ರೈತರಿಗೆ ಯೂರಿಯಾ ಲಾಭ: ಗಡ್ಕರಿ

Pinterest LinkedIn Tumblr


ಹೊಸದಿಲ್ಲಿ : ಸರಕಾರದ ಮುಂದೆ ಈಗ ಹೊಸ ಯೋಜನೆಯೊಂದು ಇದೆ. ಕೇಂದ್ರ ಸಚಿವ ನಿತಿನ್‌ ಗಡ್ಕರಿ ಅವರ ಪ್ರಕಾರ ಪ್ರತಿಯೊಂದು ತೆಹಶೀಲ್‌/ತಾಲೂಕು ಯೂರಿಯವನ್ನು ಉತ್ಪಾದಿಸಲು ಮೂತ್ರ ಬ್ಯಾಂಕನ್ನು ಸ್ಥಾಪಿಸಲಾಗುವುದು; ಆ ಮೂಲಕ ಯೂರಿಯ ಆಮದು ಅವಲಂಬನವನ್ನು ಕಡಿಮೆ ಮಾಡಬಹುದು.

ಮನುಷ್ಯನ ಮೂತ್ರದಲ್ಲಿ ಸಾಕಷ್ಟು ನೈಟ್ರೋಜನ್‌ ಇದೆ. ಆದರೆ ಇದನ್ನು ವ್ಯರ್ಥ ಮಾಡುತ್ತಿದ್ದೇವೆ. ತ್ಯಾಜ್ಯವನ್ನು ಸಂಪತ್ತಾಗಿ ಪರವರ್ತಿಸುವುದರಲ್ಲಿ ನನಗೆ ವಿಶೇಷವಾದ ಆಸಕ್ತಿ ಇದೆ. ನನ್ನ ಈ ಆಲೋಚನೆಯನ್ನು ಅನುಷ್ಠಾನಿಸುವುದರಿಂದ ಯಾರಿಗೂ ಯಾವುದೇ ಅಪಾಯವಿಲ್ಲ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ರಾಷ್ಟ್ರೀಯ ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ಹೇಳಿದ್ದಾರೆ.

ನಾಗಪುರ ಸಮೀಪದ ಧಾಪೇವಾಡ ಗ್ರಾಮದಲ್ಲಿನ ಪ್ರಯೋಗಾಲಯದಲ್ಲ ಮನುಷ್ಯನ ಮೂತ್ರವನ್ನು ಈ ದಿಶೆಯಲ್ಲಿ ಪರೀಕ್ಷೆಗೆ ಒಳಪಡಿಸಲಾಗುವುದು.

ರೈತರು ಹತ್ತು ಲೀಟರ್‌ ಕ್ಯಾನ್‌ಗಳಲ್ಲಿ ಮೂತ್ರವನ್ನು ಸಂಗ್ರಹಿಸಿ ತಾಲೂಕು ಕೇಂದ್ರಗಳಿಗೆ ತರಬೇಕು. ಇದಕ್ಕೆ ಬದಲಾಗಿ ಅವರು ತಲಾ ಲೀಟರ್‌ಗೆ 1 ರೂ.ನಂತೆ ಹಣ ಪಡೆಯುತ್ತಾರೆ ಎಂದು ಗಡ್ಕರಿ ಹೇಳಿದರು.

ಈ ಪ್ರಯೋಗವನ್ನು ಗ್ರಾಮೀಣ ಭಾಗಗಳಲ್ಲಿ ಮೊದಲಾಗಿ ಆರಂಭಿಸಲಾಗುವುದು; ರೈತರು ತಂದೊಪ್ಪಿಸುವ ಮೂತ್ರವನ್ನು ನೀರಿನೊಂದಿಗೆ ಬೆರೆಸಕೂಡದು ಎಂದು ಗಡ್ಕರಿ ಹೇಳಿದರು.

ಫಾಸ್ಪರಸ್‌ ಮತ್ತು ಪೊಟಾಸಿಯಂ ಗೆ ನಮ್ಮ ಬಳಿ ಈಗಾಗಲೇ ಜೈವಿಕ ಪರ್ಯಾಯಗಳಿವೆ. ಇದಕ್ಕೆ ನೈಟ್ರೋಜನ್‌ ಸೇರಿಸಿದೆವೆಂದರೆ ಅದು ನಿಜಕ್ಕೂ ಒಂದು ಕಾರ್ಯಸಾಧ್ಯ ಘಟಕ ಪ್ರೋತ್ಸಾಹನವಾಗುವುದು ಎಂದು ಗಡ್ಕರಿ ಹೇಳಿದರು.

-ಉದಯವಾಣಿ

Comments are closed.