ಅಂತರಾಷ್ಟ್ರೀಯ

ಒಂದು ಪತ್ರ ನೀಡಿ ಕೂಡಲೇ ಜಾಕಿರ್‌ ನಾಯಕ್‌ನನ್ನು ಹೊರಗಟ್ಟುತ್ತೇವೆ: ಮಲೇಷ್ಯಾ

Pinterest LinkedIn Tumblr


ಹೊಸದಿಲ್ಲಿ: ವಿವಾಧಿತ ಧರ್ಮ ಪ್ರಚಾರಕ ಜಾಕಿರ್‌ ನಾಯ್ಕ್‌ಗೆ ಮಲೇಷ್ಯಾದಲ್ಲಿ ಆಶ್ರಯ ದೊರಕಿದೆ ಎಂಬ ಮಾಹಿತಿ ಸಾಕಷ್ಟು ವೈರಲ್‌ ಆದ ಬೆನ್ನಲ್ಲೇ ಅಲ್ಲಿನ ಉಪ ಪ್ರಧಾನಿ ಜಾಕಿರ್‌ ನಾಯಕ್‌ನ್ನು ಹೊರಗಟ್ಟಲು ತಾವು ತಯಾರಿರುವುದಾಗಿ ಹೇಳಿದ್ದಾರೆ.

ಭಯೋತ್ಪಾದಕ ಕೃತ್ಯ ಮತ್ತು ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತದ ಕೋರ್ಟ್‌ಗಳು ಜಾಕಿರ್‌ ನಾಯ್ಕ್’ಗೆ ಕಳೆದ ತಿಂಗಳು ಎರಡನೇ ಬಾರಿಗೆ ಅರೆಸ್ಟ್‌ ವಾರೆಂಟ್‌ ಜಾರಿ ಮಾಡಿದ್ದವು. ಈ ನಡುವೆ ಜಾಕಿರ್‌ಗೆ ಮಲೇಷ್ಯಾ ಪೌರತ್ವ ನೀಡಿದ ಎಂಬ ಮಾಹಿತಿ ಹೊರಬಿದ್ದ ಕೂಡಲೇ ಪ್ರತಿಕ್ರಿಯೆ ನೀಡಿದ ಮಲೇಷ್ಯಾ ಉಪ ಪ್ರಧಾನಿ ಅಹ್ಮದ್‌ ಜಾಹಿದ್‌ ಹಮಿದಿ, ಭಾರತ ಒಂದು ಮನವಿ ಪತ್ರ ಕಳುಹಿಸಿದರೆ ಉಗ್ರ ಧರ್ಮ ಪ್ರಚಾರಕ ಝಾಕಿರ್‌ ನಾಯಕ್‌ನನ್ನು ತಮ್ಮ ರಾಷ್ಟ್ರದಿಂದ ಹೊರಗಟ್ಟುವುದಾಗಿ ತಿಳಿಸಿದ್ದಾರೆ.

ಮಲೇಷ್ಯಾದಿಂದ ದೊರಕಿದ ಬೆಂಬಲದಿಂದಾಗಿ ರಾಷ್ಟ್ರೀಯ ತನಿಖಾ ತಂಡಕ್ಕೆ ಹೊಸ ಆಯುಧ ಸಿಕ್ಕಂತಾಗಿದೆ. ಆದರೆ ಈ ವರೆಗೂ ಅಧಿಕಾರಿಗಳು ಮಾತ್ರಾ ಮನವಿ ಪತ್ರ ಕಳುಹಿಸಿಲ್ಲ. ಆದರೆ ಶೀಘ್ರದಲ್ಲೇ ಪತ್ರವನ್ನು ಕಳುಹಿಸಿಕೊಡಲು ಇಲಾಖೆ ತೀರ್ಮಾನಿಸಿದ್ದು, ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಮೂಲಕ ಈ ಪತ್ರವನ್ನು ಕಳುಹಿಸಿ ಕೊಡಲಾಗುತ್ತದೆ ಎಂದು ಎನ್‌ಐಎ ಅಧಿಕಾರಿಗಳು ಹೇಳಿದ್ದಾರೆ.

Comments are closed.