ನವದೆಹಲಿ: ದೇಶದಲ್ಲಿನ ನಿರುದ್ಯೋಗ, ಕಪ್ಪು ಹಣದ ವಿಚಾರವನ್ನು ನಿರ್ಲಕ್ಷಿಸಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿಯನ್ನು ಮುಂದುವರಿಸಿರುವ ಪಾಟಿದಾರ್ ಅನಾಮತ್ ಆಂದೋಲನ ಸಮಿತಿ(ಪಿಎಎಎಸ್)ಮುಖಂಡ ಹಾರ್ದಿಕ್ ಪಟೇಲ್, ಎಲ್ಲದಕ್ಕೂ ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡುವ ಕೇಂದ್ರ ಸರ್ಕಾರದ ನಿರ್ಧಾರದ ಬಗ್ಗೆ ಟ್ವೀಟ್ ನಲ್ಲಿ ವ್ಯಂಗ್ಯವಾಡಿದ್ದಾರೆ.
ಪ್ರತಿಯೊಂದಕ್ಕೂ ಆಧಾರ್ ಲಿಂಕ್ ಮಾಡಿಸುತ್ತಿದ್ದೀರಿ, ಹಾಗಾದರೆ ಮುಂದೇನು? ಸ್ವಿಸ್ ಬ್ಯಾಂಕ್ ಖಾತೆಗಳಿಗೆ ಆಧಾರ್ ಜೋಡಿಸುವುದೇ ಎಂದು ಪಟೇಲ್ ಟೀಕಿಸಿದ್ದಾರೆ.
ಮುಂಬರುವ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಬಲಪ್ರದರ್ಶನ ತೋರ್ಪಡಿಸಲು ಹಾರ್ದಿಕ್ ಮುಂದಾಗಿದ್ದು, ತಾನು ಆಯೋಜಿಸಿದ್ದ ಚುನಾವಣಾ ರಾಲಿಯಲ್ಲಿ ಭಾಗವಹಿಸಿದ್ದ ಜನಸಾಗರದ ಫೋಟೋವನ್ನು ಟ್ವೀಟ್ ಮಾಡಿದ್ದಾರೆ.
-ಉದಯವಾಣಿ